ಮನೆ ರಾಷ್ಟ್ರೀಯ ಮುಂಬೈ: ಪಿಎಫ್’ಐ ಸಂಘಟನೆಯ ನಾಲ್ವರನ್ನು ಬಂಧಿಸಿದ ಎಟಿಎಸ್

ಮುಂಬೈ: ಪಿಎಫ್’ಐ ಸಂಘಟನೆಯ ನಾಲ್ವರನ್ನು ಬಂಧಿಸಿದ ಎಟಿಎಸ್

0

ಮುಂಬೈ(Mumbai): ರಾಯಗಢ ಜಿಲ್ಲೆಯ ಪನ್ವೇಲ್‌ನಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಾಲ್ವರು ಸದಸ್ಯರನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ಬಂಧಿಸಿದೆ.

ಬಂಧಿತರಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಸ್ಥಳೀಯ ಘಟಕದ ಕಾರ್ಯದರ್ಶಿ, ರಾಜ್ಯ ವಿಸ್ತರಣಾ ಸಮಿತಿಯ ಸದಸ್ಯರು ಸೇರಿದ್ದಾರೆ.

ಕೇಂದ್ರ ಸರ್ಕಾರವು ಸಂಘಟನೆ ಮೇಲೆ ನಿಷೇಧ ಹೇರಿದ್ದರೂ ಮುಂಬೈಯಿಂದ 50 ಕಿ.ಮೀ. ದೂರದಲ್ಲಿರುವ ಪನ್ವೇಲ್‌ನಲ್ಲಿ‌ ಪಿಎಫ್‌ಐ ಸದಸ್ಯರು ಸಭೆ ಸೇರಿದ್ದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿರುವ ಎಟಿಎಸ್, ಪಿಎಫ್‌ಐ ಸದಸ್ಯರನ್ನು ಬಂಧಿಸಿದೆ.

ಕಳೆದ ತಿಂಗಳು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಪಿಎಫ್‌ಐ ಸೇರಿದಂತೆ ಬೆಂಬಲಿತ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ನಿಷೇಧ ಹೇರಿತ್ತು.

ಹಿಂದಿನ ಲೇಖನನಂಜನಗೂಡು: ಅಂಗನವಾಡಿಗೆ ಹುಳು ಹಿಡಿದ ಆಹಾರ ಸರಬರಾಜು
ಮುಂದಿನ ಲೇಖನವಾಕಥಾನ್’ಗೆ ಚಾಲನೆ ನೀಡಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ