ಮನೆ ರಾಷ್ಟ್ರೀಯ ಅರುಣಾಚಲದ ದುರ್ಗಮ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಮುಂದುವರೆದ ಶೋಧ ಕಾರ್ಯ

ಅರುಣಾಚಲದ ದುರ್ಗಮ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಮುಂದುವರೆದ ಶೋಧ ಕಾರ್ಯ

0

ಗುವಾಹಟಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಚಿಂಗ್ಗಿಂಗ್ ಗ್ರಾಮದ ಸಮೀಪ ಸೇನಾ ಹೆಲಿಕಾಪ್ಟರ್ ಇಂದು ಪತನಗೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್ ಎಚ್) ಪತನಗೊಂಡ ಸ್ಥಳಕ್ಕೆ ತೆರಳಲು ಯಾವುದೇ ರಸ್ತೆ ಸಂಪರ್ಕ ಇಲ್ಲ. ಆದರೆ ಹೆಲಿಕಾಪ್ಟರ್ ಪತ್ತೆ ಹಚ್ಚಲು ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಅಪ್ಪರ್ ಸಿಯಾಂಗ್ ಹಿರಿಯ ಪೊಲೀಸ್ ಅಧಿಕಾರಿ ಜುಮ್ಮಾರ್ ಬಸಾರ್ ತಿಳಿಸಿದ್ದಾರೆ.

ಈ ಗ್ರಾಮವನ್ನು ಸಂಪರ್ಕಿಸಲು ತೂಗು ಸೇತುವೆ ಹೊರತುಪಡಿಸಿ ಬೇರೆ ಯಾವುದೇ ಸಂಚಾರ ಮಾರ್ಗವಿಲ್ಲ. ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಎರಡು ಹೆಲಿಕಾಪ್ಟರ್ ಗಳಲ್ಲಿ ರಕ್ಷಣಾ ತಂಡವನ್ನು ರವಾನಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿರುವುದಾಗಿ ವರದಿ ತಿಳಿಸಿದೆ.