ಮನೆ ಅಪರಾಧ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಬಸ್- ಟ್ರಕ್ ನಡುವೆ ಡಿಕ್ಕಿ 15 ಮಂದಿ ಸಾವು

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಬಸ್- ಟ್ರಕ್ ನಡುವೆ ಡಿಕ್ಕಿ 15 ಮಂದಿ ಸಾವು

0

ಭೋಪಾಲ್(Bhopal): ಮಧ್ಯಪ್ರದೇಶದ ರೆವಾ ಜಿಲ್ಲೆಯ ಸುಹಾಸಿ ಪಹರಿ ಬಳಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, 15 ಮಂದಿ ಮೃತಪಟ್ಟಿದ್ದಾರೆ.

40 ಮಂದಿ ಗಾಯಗೊಂಡಿದ್ದು, ಈ ಪೈಕಿ 20 ಜನರನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದು, ಬಸ್‌ನಲ್ಲಿದ್ದವರೆಲ್ಲ ಉತ್ತರ ಪ್ರದೇಶದ ನಿವಾಸಿಗಳು ಎಂದು ರೆವಾ ಎಸ್‌ಪಿ ನವನೀತ್ ಭಾಸಿನ್ ಹೇಳಿದ್ದಾರೆ.

ದೀಪಾವಳಿ ಹಬ್ಬವನ್ನು ಆಚರಿಸಲು ಹೈದರಾಬಾದ್​ನಿಂದ ಪ್ರಯಾಣಿಕರು ಲಖನೌದಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೈದರಾಬಾದ್​ನಿಂದ ಕಟ್ನಿಗೆ ತಲುಪಿತು. ಕಟ್ನಿಯಲ್ಲಿ ಹೆಚ್ಚಿನ ಪ್ರಯಾಣಿಕರು ತುಂಬಿದ ನಂತರ ಬಸ್ ಉತ್ತರ ಪ್ರದೇಶದ ಲಖನೌಗೆ ಸಾಗಿತು. ರೇವಾದ ಸೊಹಗಿ ತಲುಪಿದ ತಕ್ಷಣ ಅನಿಯಂತ್ರಿತ ಬಸ್​ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ ಡಿಕ್ಕಿ ರಭಸಕ್ಕೆ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್ ಮುಂಭಾಗ ಕುಳಿತಿದ್ದ ಎಲ್ಲಾ ಪ್ರಯಾಣಿಕರು ಸಾವು:

ಮಾಹಿತಿ ಪ್ರಕಾರ ಬಸ್​​’ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬಸ್ ಸೊಹಗಿ ಪರ್ವತದ ಬಳಿ ತಲುಪುತ್ತಿದ್ದಂತೆಯೇ ಬಸ್ಸಿನ ಮುಂದೆ ಹೋಗುತ್ತಿದ್ದ ಲಾರಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಟ್ರಕ್​ ರಸ್ತೆಯಲ್ಲೇ ನಿಂತಿದೆ. ಟ್ರಕ್​ ಹಿಂದೆ ಅತಿವೇಗದಲ್ಲಿ ಬರುತ್ತಿದ್ದ ಬಸ್ ​ಅನಿಯಂತ್ರಣಗೊಂಡು ಟ್ರಕ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪೊಲೀಸ್ ತಂಡ ಕೂಡ ಸ್ಥಳಕ್ಕೆ ತಲುಪಿದ್ದು, ಘಟನಾ ಸ್ಥಳವು ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮತ್ತು ಎಸ್ಪಿ ನವನೀತ್ ಭಾಸಿನ್ ಎಲ್ಲಾ ಆಡಳಿತ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಿದರು.