ಮನೆ ರಾಜಕೀಯ ಪಕ್ಷದ ವತಿಯಿಂದ ಸೂಕ್ತವಾದ ಸ್ಥಾನಮಾನದ ನಿರೀಕ್ಷೆ: ಕಾಶಪ್ಪನವರ್

ಪಕ್ಷದ ವತಿಯಿಂದ ಸೂಕ್ತವಾದ ಸ್ಥಾನಮಾನದ ನಿರೀಕ್ಷೆ: ಕಾಶಪ್ಪನವರ್

0

ಬೆಂಗಳೂರು- ಬರುವ ದಿನಗಳಲ್ಲಿ ಪಕ್ಷದ ವತಿಯಿಂದ ತಮಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಯಿರುವ ಕಾರಣ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಶಾಸಕ ವಿಜಯನಂದಾ ಕಾಶಪ್ಪನವರ್ ಸ್ಪಷ್ಟಪಡಿಸಿದರು.

Join Our Whatsapp Group

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂಬುದು ಕಾರ್ಯಕರ್ತರ ಹಾಗೂ ಸಮಾಜದ ಮುಖಂಡರ ಒತ್ತಾಸೆಯಾಗಿತ್ತು. ಅಂತಿಮವಾಗಿ ನಮ್ಮ ಒಲವು ನಿಲುವು ಏನೇ ಇದ್ದರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಲೇ ಬೇಕು ಎಂದು ಹೇಳಿದರು.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಸಂಭವವಿತ್ತು. ದೆಹಲಿಯಲ್ಲಿ ಕೊನೆ ಕ್ಷಣದವರೆಗೂ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ಕೊನೆ ಕ್ಷಣದಲ್ಲಿ ಬಿಟ್ಡು ಹೋಗಿದೆ. ಯಾವ ಕಾರಣಕ್ಕಾಗಿ ಹೀಗೆ ಆಯಿತು ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ನನಗಿಂತ ಹೆಚ್ಚಾಗಿ ಬಾಗಲಕೋಟೆ ಹಾಗೂ ನನ್ನ ಮತಕ್ಷೇತ್ರವಾದ ಹುನಗುಂದ ಕ್ಷೇತ್ರದ ಕಾರ್ಯಕರ್ತರು  ವಿಜಯನಂದಾ ಕಾಶಪ್ಪನವರ್ ಗೆ ಸಚಿವ ಸ್ಥಾನ ಸಿಕ್ಕರೆ ಈ‌ ಭಾಗದಲ್ಲಿ ಕಾಂಗ್ರೆಸ್ ಸಂಘಟನೆ ಹೆಚ್ಚಿನ ಅನುಕೂಲ ಆಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೂ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆಬಾಗಲೇಬೇಕು. ನನಗೆ ಯಾವುದೇ ರೀತಿಯಲ್ಲೂ ಅಸಮಾಧಾನ ಇಲ್ಲ. ಬರುವ ದಿನಗಳಲ್ಲಿ ನನಗೆ ಖಂಡಿತ ಪಕ್ಷ ಸೂಕ್ತವಾದ ಸ್ಥಾನಮಾನ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನನಗೆ ಯಾರು ಸಚಿವ ಸ್ಥಾನ ತಪ್ಪಿಸಿದರು ಎಂಬುದನ್ನು ನಾನು ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಯಾರೊಬ್ಬರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಲು ಹೋಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು ಎಂಬುದು ಜನತೆಯ ಕನಸು.ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸಚಿವ ಸ್ಥಾನ ಕೈ ತಪ್ಪಿದರೂ ಶಾಸಕನಾಗಿಯೇ ಉತ್ತಮ ಕೆಲಸ ಮಾಡುವುದಾಗಿ ಕಾಶಪ್ಪನವರ್ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜಕ್ಕೆ‌‌ ಮೀಸಲಾತಿ ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಯಿತು.ಪರಿಣಾಮ ಇದೇ ಮೊದಲ ಬಾರಿಗೆ ನಮ್ಮ ಸಮುದಾಯದ ವತಿಯಿಂದ ಹೆಚ್ಚಿನ ಸಂಖ್ಯೆಯ ಶಾಸಜರನ್ನು ಜನರು ಆಯ್ಕೆ ಮಾಡಿದ್ದಾರೆ. ಹೀಗಾಗಿ  ಸಂಪುಟದಲ್ಲಿ  ಐವರಿಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಲಾಗಿತ್ತು. ಇದರಲ್ಲಿ ತಪ್ಪೇನು ಇಲ್ಲ ಎಂದು ಕಾಶಪ್ಪನವರ್ ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ತಮ್ಮ ಬಳಿ ಮಾತನಾಡಿದ್ದು, ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ಕೊಟ್ಟಿದ್ದಾರೆ. ಸಂಪುಟದಲ್ಲಿ ಪಂಚಮಸಾಲಿ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಅನ್ಯಾಯವಾಗಿಲ್ಲ ಎಂದು ಹೇಳಿದರು.

ಹಿಂದಿನ ಲೇಖನನಂಜನಗೂಡು:  ಹುಲಿ ದಾಳಿ- ವ್ಯಕ್ತಿಗೆ ಗಾಯ
ಮುಂದಿನ ಲೇಖನಮುಂದಿನ ಸಚಿವ ಸಂಪುಟದಲ್ಲಿ ಗ್ಯಾರಂಟಿ ಕುರಿತು ಸ್ಪಷ್ಟ ನಿರ್ಧಾರ: ಸಿಎಂ ಸಿದ್ದರಾಮಯ್ಯ