ಮನೆ ಸುದ್ದಿ ಜಾಲ ವಿಜಯಪುರ: ಹಳಿ ತಪ್ಪಿ ಬಿದ್ದ ಗೂಡ್ಸ್ ರೈಲು, ಆರು ರೈಲುಗಳ ಸಂಚಾರ ರದ್ದು

ವಿಜಯಪುರ: ಹಳಿ ತಪ್ಪಿ ಬಿದ್ದ ಗೂಡ್ಸ್ ರೈಲು, ಆರು ರೈಲುಗಳ ಸಂಚಾರ ರದ್ದು

0

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಬಿದ್ದಿದೆ.

ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲು ಹಳಿ ತಪ್ಪಿ ಬಿದ್ದ ಹಿನ್ನೆಲೆಯಲ್ಲಿ ಆರು ಬೋಗಿಗಳು ಕಟ್ ಆಗಿ ಜಖಂಗೊಂಡಿದೆ. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಹಳಿ ತಪ್ಪಿದ ರೈಲುರೈಲು ಬೋಗಿಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಸೊಲ್ಲಾಪುರ ಹಾಗೂ ವಿಜಯಪುರ ಮಾರ್ಗದಿಂದ ಹುಬ್ಬಳ್ಳಿ ಮಾರ್ಗಕ್ಕೆ ಹೋಗಬೇಕಿದ್ದ ಆರು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು‌ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.