ಮನೆ ರಾಜಕೀಯ ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ?: ಕಾಂಗ್ರೆಸ್ ಪ್ರಶ್ನೆ

ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ?: ಕಾಂಗ್ರೆಸ್ ಪ್ರಶ್ನೆ

0

ಬೆಂಗಳೂರು(Bengaluru): ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿಡಿ ಹಾವೇ? ಎಂದು  ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರ ‘ಹಾವು’ ಬಿಡುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಯತ್ನಾಳ ಅವರ ಹೇಳಿಕೆಯ ವರದಿಯನ್ನು ಕಾಂಗ್ರೆಸ್‌ ಕಿಟಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ Vs ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ. ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ. ಯತ್ನಾಳರ ಹಾವು ಯಾವುದು? ಭ್ರಷ್ಟಾಚಾರದ ಹಾವೇ? ಸಿ.ಡಿ ಹಾವೇ? ಎಂದು ಪ್ರಶ್ನಿಸಿದೆ.

ಶಿಸ್ತಿನ ಪಕ್ಷ ಎಂದುಕೊಳ್ಳುವ ಬಿಜೆಪಿಗೆ ಕನಿಷ್ಠ ಪಕ್ಷ ಒಬ್ಬ ಯತ್ನಳರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು ಎಂಬುದು ಸ್ಪಷ್ಟ! ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಆಡುವ ಮಾತುಗಳು ಬಿ.ಎಲ್.ಸಂತೋಷ್ ಅವರದ್ದು, ಬಾಯಿ ಮಾತ್ರ ಯತ್ನಾಳ್‌’ ರದ್ದು ಎಂದು ಆರೋಪಿಸಿದ್ದಾರೆ.

ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ ಅವರು ತಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳುಹಿಸುತ್ತಿದ್ದಾನೆ ಎಂದು ಯತ್ನಾಳ ಹೇಳಿರುವುದಾಗಿ ವರದಿಯಲ್ಲಿದೆ.