ಮನೆ ರಾಜ್ಯ ದೀಪಾವಳಿಯ ಮೊದಲ ದಿನದಂದೇ ಪಟಾಕಿಯಿಂದ 11 ಮಂದಿಗೆ ಗಾಯ

ದೀಪಾವಳಿಯ ಮೊದಲ ದಿನದಂದೇ ಪಟಾಕಿಯಿಂದ 11 ಮಂದಿಗೆ ಗಾಯ

0

ಬೆಂಗಳೂರು(Bengaluru): ದೀಪಾವಳಿ ಮೊದಲ ದಿನವಾದ ಸೋಮವಾರದಂದು ಪಟಾಕಿಯಿಂದ 11 ಮಂದಿ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ಬಹುತೇಕರು ಮಿಂಟೋ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಮರಾಜಪೇಟೆಯ‌ 10 ವರ್ಷದ ಬಾಲಕ ಆಜಾದ್, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ ಸಂಗೀತ ವರ್ಮಾ 49 ವರ್ಷ, ಅವೆನ್ಯೂ ರಸ್ತೆಯ 22 ವರ್ಷದ ಅಬೀಬುಲ್ಲ ಸೇರಿ ಒಟ್ಟು 11 ಜನರಿಗೆ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ‌.

ಪಟಾಕಿ ಹೊಡೆಯುವಾಗ ಕೆಲವರು ಗಾಯಗೊಂಡರೆ ಹಾಗೂ ಇನ್ನೂ ಕೆಲವರು ದಾರಿಯಲ್ಲಿ ಹೋಗುವಾಗ ಪಟಾಕಿ ಸಿಡಿದಿದೆ.