ಮನೆ ಸುದ್ದಿ ಜಾಲ ಮೈಸೂರು: ನಿಷೇಧಿತ ಪಿಎಫ್’ಐ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೆ ಮೇಲೆ ಎನ್’ಐಎ ದಾಳಿ

ಮೈಸೂರು: ನಿಷೇಧಿತ ಪಿಎಫ್’ಐ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೆ ಮೇಲೆ ಎನ್’ಐಎ ದಾಳಿ

0

ಮೈಸೂರು(Mysuru): ಕೊಲೆಯಾದ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ನಿಷೇಧಿತ ಪಿಎಫ್’​ಐ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೆ ಮೇಲೆ ಎನ್’​ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ದಾಳಿ ನಡೆಸಿದೆ.

ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ರಾಜ್ಯದ ಹಲವು ಕಡೆ ಎನ್​ಐಎ ದಾಳಿ ನಡೆಸಿದೆ.

ಮೈಸೂರಿನ ಮಂಡಿ ಮೋಹಲ್ಲಾದಲ್ಲಿರುವ ನಿಷೇಧಿತ ಪಿಎಫ್​​ಐ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಸುಲೆಮಾನ್ ಎಂಬುವರ ಮನೆ ಮೇಲೆ ಸಹ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ. ಅಲ್ಲದೇ, ಸುಲೆಮಾನ್ ದೂರವಾಣಿ ಕರೆ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.