Saval TV on YouTube
ಚಾಮರಾಜನಗರ(Chamarajanagar): ಬರ, ಅಕಾಲಿಕ ಮಳೆ ಹಾಗೂ ಕಾಡು ಪ್ರಾಣಿಗಳಿಂದ ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಿಕೊಂಡಿದ್ದ ರೈತರಿಗೆ ಈಗ ಕಳ್ಳರ ಕಾಟ ತಲೆನೋವಾಗಿ ಪರಿಣಮಿಸಿದೆ
ಬಾಳೆಗೆ ಬೆಲೆ ಹೆಚ್ಚಾದಂತೆ ಬೇಡರಪುರ ಹಾಗೂ ಹೆಗ್ಗೋಠಾರ ಗ್ರಾಮದಲ್ಲಿ ಬಾಳೆಗೊನೆಗಳನ್ನು ಖದೀಮರು ಕಟಾವು ಮಾಡಿರುವ ಘಟನೆ ನಡೆದಿದೆ.
ಬೇಡರಪುರ ಗ್ರಾಮದ ಮೂರ್ತಿ ಎಂಬುವರ ಜಮೀನಿನಲ್ಲಿ ರಾತ್ರೋರಾತ್ರಿ 300ಕ್ಕೂ ಹೆಚ್ಚು ಬಾಳೆಗೊನೆಗಳನ್ನು ಕದ್ದು ಕಟಾವು ಮಾಡಿಕೊಂಡು ಹೋಗಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದು, ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.