ಮನೆ ರಾಜಕೀಯ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು

ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು

0

ನವದೆಹಲಿ: ಯುದ್ಧ ಪೀಡಿತ ದೇಶ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೂರವಾಣಿ ಮೂಲಕ ಮಾತನಾಡಿ, ಅಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.

ಇದೇ ವೇಳೆ, ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರಕ್ಕೆ ಸಹಾಯ ಮಾಡಿದ್ದ ಬಗ್ಗೆ ಉಕ್ರೇನ್​ ಅಧ್ಯಕ್ಷರಿಗೆ ಪ್ರಧಾನಿ ಧನ್ಯವಾದಗಳನ್ನೂ ಹೇಳಿದರು. ಅಲ್ಲಿ ಇನ್ನೂ ಸಿಲುಕಿರುವ ಭಾರತದ ಪ್ರಜೆಗಳನ್ನು ಕರೆತರಲು ಮುಂದೆ ಕೂಡ ಸಹಾಯ ಮಾಡಬೇಕೆಂದು ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಕೋರಿದರು.

ರಷ್ಯಾ ಮತ್ತು ಉಕ್ರೇನ್​ ಯುದ್ಧ ಆರಂಭವಾಗಿ 12 ದಿನಗಳು ಆಗಿದೆ. ಯುದ್ಧ ಆರಂಭವಾದ ಬಳಿಕ ಈ ಹಿಂದೆ ಒಮ್ಮೆ ಪ್ರಧಾನಿ ಮೋದಿ ಮಾತನಾಡಿದ್ದರು. ಇಂದು ಎರಡನೇ ಬಾರಿಗೆ ದೂರವಾಣಿ ಮೂಲಕ ಉಕ್ರೇನ್​ ಅಧ್ಯಕ್ಷರಿಗೆ ಕರೆ ಮಾತನಾಡಿದ್ದು, ಉಭಯ ನಾಯಕರು ಸುಮಾರು 35 ನಿಮಿಷಗಳ ಕಾಲ ಮತುಕತೆ ನಡೆಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.

ಅಲ್ಲದೇ, ಯುದ್ಧ ಬಗ್ಗೆ ರಷ್ಯಾ ಮತ್ತು ಉಕ್ರೇನ್​ ನಡುವೆ ನಡೆಯುತ್ತಿರುವ ಸಂಧಾನದ ಮಾತುಕತೆ ಬಗ್ಗೆಯೂ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಇನ್ನು, ಇವತ್ತೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೂ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಹಿಂದಿನ ಲೇಖನಧನದಾಹಿಗಳಾಗಿರುವ ಪೊಲೀಸರು: ಇಷ್ಟು ಒಳ್ಳೆಯ ಆಡಳಿತ ಇನ್ಯಾರು ಕೊಡ್ತಾರೆ ?- ಡಿಕೆಶಿ ವ್ಯಂಗ್ಯ
ಮುಂದಿನ ಲೇಖನಕೌಟುಂಬಿಕ ಕಲಹ: ಪತ್ನಿ, ಮತ್ತವಳ ಸಹೋದರರನ್ನು ಹತ್ಯೆ ಮಾಡಿದ ವ್ಯಕ್ತಿ