Saval TV on YouTube
ಮಡಿಕೇರಿ(Madikeri): ವೀಸಾ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಶ್ರೀನಾಥ್ ಬಂಧಿತ ಆರೋಪಿ.
ಶ್ರೀನಾಥ್ ಎಂಬಾತ 60 ಕ್ಕೂ ಹೆಚ್ಚು ಜನರಿಗೆ ವೀಸಾ ಕೊಡಿಸುವುದಾಗಿ ನಂಬಿಸಿ, ಪ್ರತಿಯೊಬ್ಬರಿಂದ 1 ಲಕ್ಷ ರೂ ನಂತೆ ಕೋಟ್ಯಾಂತರ ರೂ ವಂಚಿಸಿದ್ದ ಎನ್ನಲಾಗಿದೆ.
ಕೊಡಗು, ದಕ್ಷಿಣ ಕನ್ನಡ, ಕೇರಳಾದಲ್ಲೂ ಆರೋಪಿ ವಂಚನೆ ಮಾಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.