ಮನೆ ಸುದ್ದಿ ಜಾಲ ವೀರ ವನಿತೆಯರ ಈ ಕಾರ್ಯಕ್ರಮಗಳು ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ: ಶಿವಕುಮಾರ್

ವೀರ ವನಿತೆಯರ ಈ ಕಾರ್ಯಕ್ರಮಗಳು ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ: ಶಿವಕುಮಾರ್

0

ಮೈಸೂರು(Mysuru): ವೀರ ವನಿತೆಯರ ಈ ಕಾರ್ಯಕ್ರಮಗಳು ಇವತ್ತಿನ ಎಲ್ಲಾ ಹೆಣ್ಣು ಮಕ್ಕಳಿಗೆ   ಸ್ಪೂರ್ತಿದಾಯಕ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಸಮಿತಿ ಹಾಗೂ ಒನಕೆ ಓಬವ್ವ ಜಯಂತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ  ನಗರದ ಕಿರು ರಂಗಮಂದಿರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶಭಕ್ತಿಯನ್ನು ಮತ್ತು ಧೈರ್ಯವನ್ನು  ತೋರಲಿಕ್ಕೆ ಈ ರೀತಿಯ ಮಹಾಮಣಿಯರ ಜಯಂತಿಯನ್ನು ಆಚರಣೆ ಮಾಡುತ್ತೇವೆ  ಹಾಗೂ  ಚಿತ್ರದುರ್ಗದ ಮದಕರಿ ನಾಯಕರ ಕೋಟೆಯನ್ನು  ಹೈದರಾಲಿಗಳು  ಮುತ್ತಿಗೆ ಹಾಕಲು ಬಂದಾಗ ಒನಕೆ ಓಬವ್ವ ಅವರನ್ನು ಸದೆಬಡೆದು  ಕೋಟೆಯನ್ನು ಕಾಪಾಡಿ ಓಬವ್ವ ತನ್ನ ಸ್ವಾಮಿನಿಷ್ಠೆ,ದೈರ್ಯ,ತ್ಯಾಗದ ಸಂಗಮ ಎಂದು  ಹೇಳಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶನ ಪ್ರಾಧ್ಯಾಪಕರಾದ ಪ್ರೊ.ಪ್ರೀತಿ ಶುಭಚಂದ್ರ ಅವರು  ಮಾತನಾಡಿ  ಬ್ರಿಟಿಷರು ಏಕಚಂದ್ರದಿಪಥ್ಯಕ್ಕೆ ಬರುವ ಮುನ್ನ  ಧರ್ಮ, ಭಾಷೆ, ಆಚಾರ, ನಂಬಿಕೆಗಳು ಇರುವಂತಹ  ಬೃಹತ್ ಜನಸಮುದಾಯವುಳ್ಳ ಭಾರತವನ್ನ ಅಖಂಡ ರಾಷ್ಟ್ರ ಎಂದು  ಪರಿಗಣಿಸಲು ಅವರು ಸಿದ್ಧ ಇರಲಿಲ್ಲ ಎಂದು ಹೇಳಿದರು.

ಸ್ವಾತಂತ್ರ ಹೋರಾಟಗಾರರು ಸ್ವತಂತ್ರ ಭಾರತದ ಕಲ್ಪನೆ  ಸಹಕಾರಗೊಳ್ಳಲು ಭಾರತವನ್ನ ಅಖಂಡ  ರಾಷ್ಟ್ರವಾಗಿ ಸರಿಭಾವಿಸಲು  ಬೇಕಾದ ತಾಂತ್ರಿಕ ಸಿದ್ಧತೆಯನ್ನು  ಮಾಡಿಕೊಂಡಿದ್ದರು ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ,   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಸುದರ್ಶನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.