ಮನೆ ಸುದ್ದಿ ಜಾಲ ಸಾಹಿತಿ ಎಸ್.ಎಲ್ ಭೈರಪ್ಪ ಸೇರಿದಂತೆ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿ

ಸಾಹಿತಿ ಎಸ್.ಎಲ್ ಭೈರಪ್ಪ ಸೇರಿದಂತೆ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿ

0

ಮೈಸೂರು(Mysuru):  ಸಾಹಿತಿ ಎಸ್.ಎಲ್ ಭೈರಪ್ಪ ಸೇರಿ ಮೂವರಿಗೆ ಮೈಸೂರು ವಿವಿ ಭಾರತ ರತ್ನ ಶತಮಾನೋತ್ಸವ ಪದವಿಯನ್ನು ನೀಡಲು ತಜ್ಞರ ಸಮಿತಿ ನಿರ್ಧರಿಸಿದೆ.

ಮೈಸೂರು ವಿಶ್ವವಿದ್ಯಾನಿಲಯವು 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ಇದರ ಸವಿನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಶತಮಾನೋತ್ಸವ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಭಾರತ ರತ್ನ ಶತಮಾನೋತ್ಸವ ಪದವಿಯನ್ನು ನೀಡುತ್ತಿದೆ.

ಯಾರಿಗೆ ಶತಮಾನೋತ್ಸವ ಪದವಿ ?

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಎಸ್.ಎಲ್. ಭೈರಪ್ಪ ಅವರಿಗೆ ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ಸಾಮಾಜಿಕ ವಿಜ್ಞಾನ ಶತಮಾನೋತ್ಸವ ಪದವಿ.

ಬೆಂಗಳೂರಿನ ಐಐಐಟಿ ಸಂಸ್ಥಾಪಕ ನಿರ್ದೇಶಕ ಪ್ರೊ. ಎಸ್. ಸಡಗೋಪನ್‌ ಅವರಿಗೆ ಸರ್ ಎಂ. ವಿಶ್ವೇಶ್ವರಯ್ಯ ನಾವೀನ್ಯ ತಂತ್ರಜ್ಞಾನ ಶತಮಾನೋತ್ಸವ ಪದವಿ.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ, ಕೆ.ಎಸ್. ರಂಗಪ್ಪ ಅವರಿಗೆ ಭಾರತ ರತ್ನ ಪ್ರೊ. ಸಿ.ಎನ್‌.ಆರ್. ರಾವ್ ವಿಜ್ಞಾನ ಶತಮಾನೋತ್ಸವ ಪದವಿ  ನೀಡಲಾಗುವುದು.