ಮನೆ ಸುದ್ದಿ ಜಾಲ ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ  ಸಿದ್ಧ: ಯದುವೀರ್ ಒಡೆಯರ್

ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ  ಸಿದ್ಧ: ಯದುವೀರ್ ಒಡೆಯರ್

0

ಚಾಮರಾಜನಗರ:  ಮೈಸೂರು ಅರಮನೆ ಹಿಂದೆಯೂ ಸದಾ ಸಿದ್ಧವಾಗಿತ್ತು ಮತ್ತು ಈಗಲೂ ಹಿಂದೂ ಧರ್ಮ ರಕ್ಷಣೆಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಚಾಮರಾಜನಗರದ ನಂದಿ ಭವನದಲ್ಲಿ ಆಯೋಜಿಸಲಾಗಿರುವ ಎಬಿವಿಪಿ 41ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, “ ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ ಪರಿಹಾರ ಮತ್ತು ಉತ್ತರವಿದೆ. ಆದ್ದರಿಂದ‌ ಧರ್ಮ ರಕ್ಷಣೆ ತುಂಬಾ ಅಗತ್ಯವಾಗಿದೆ. ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಟ್ಟುಗೂಡಬೇಕು” ಎಂದು ಹೇಳಿದರು.
ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಾಗಿ, ಕಡಿಮೆ ಸಂಖ್ಯೆಯಲ್ಲಿದ್ದ ಬ್ರಿಟಿಷರು ಭಾರತವನ್ನು ಆಳಲು ಸಾಧ್ಯವಾಯಿತು. ಜಯ ಚಾಮರಾಜ ಒಡೆಯರ್ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿದ್ದರು. ಜೊತೆಗೆ ಬೇಸಿಗೆ ಅರಮನೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಸಮ್ಮೇಳನವೂ ನಡೆದಿತ್ತು ಎಂದು ಸ್ಮರಿಸಿಕೊಂಡರು. ಧರ್ಮದ ಜೊತೆ ಪರಿಸರ ರಕ್ಷಣೆಗೂ ನಾವು ಆದ್ಯತೆ ಕೊಡಬೇಕು. ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರ ಕೊಡಬೇಕು. ಶಿಕ್ಷಣದಿಂದಲೇ ಈ ಬಗ್ಗೆ ಜಾಗೃತಿ ಮಾಡಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಅಯ್ಯಪ್ಪನ್‌ ಮಾತನಾಡಿ, ಐಟಿ, ಬಿಟಿಯಲ್ಲಿ ಕರ್ನಾಟಕವು ಮುಂಚೂಣಿ ಪಾತ್ರದಲ್ಲಿದೆ. ನವ ಶಿಕ್ಷಣ ನೀತಿಯು ವಿಫುಲ ಅವಕಾಶಗಳನ್ನು ನೀಡುತ್ತಿದ್ದ, ಇದನ್ನು ವಿದ್ಯಾರ್ಥಿ ಸಮೂಹ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇವತ್ತಿನ ಸಮಸ್ಯೆಗಳು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಅವು ಜಾಗತಿಕ ಮಟ್ಟದವರೆಗೆ ಬೆಳೆದು ನಿಲ್ಲುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಆಲೋಚನೆ ಹಾಗೂ ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ವರ್ತಿಸಬೇಕು. ಇದರಲ್ಲಿ ಒಳ್ಳೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದಿನ ಲೇಖನಕುಶಾಲನಗರ ಕಸಾಪದಿಂದ ಸಾಹಿತಿ ಚೆನ್ನವೀರಕಣವಿಗೆ ಶ್ರದ್ದಾಂಜಲಿ
ಮುಂದಿನ ಲೇಖನಒಂದು ತಿಂಗಳು ಪದವಿ ಪರೀಕ್ಷೆ ಮುಂದೂಡಲು ವಿವಿಗಳಿಗೆ ಸೂಚನೆ