ಮನೆ ಅಂತಾರಾಷ್ಟ್ರೀಯ ಜಿ–20 ಶೃಂಗಸಭೆ: ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ ಗಿಡ ನೆಟ್ಟ ವಿಶ್ವ ನಾಯಕರು

ಜಿ–20 ಶೃಂಗಸಭೆ: ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ ಗಿಡ ನೆಟ್ಟ ವಿಶ್ವ ನಾಯಕರು

0

ಬಾಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರು ಬಾಲಿಯ ತಮನ್ ಹುತಾನ್ ರಾಯ ಮ್ಯಾಂಗ್ರೋವ್ ಕಾಡಿಗೆ ಇಂದು ಭೇಟಿ ನೀಡಿ ಸಸಿಗಳನ್ನು ನೆಟ್ಟರು. ನಂತರ ಮ್ಯಾಂಗ್ರೋವ್ ಕಾಡುಗಳ ಸುತ್ತ ಹೆಜ್ಜೆ ಹಾಕಿದರು.

ಇದಕ್ಕೂ ಮುಂಚೆ ಅವರು ಸಸಿಗಳನ್ನು ನೆಟ್ಟರು. ಇದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲು ಹತ್ತುವಾಗ ಮುಗ್ಗರಿಸಿದರು. ಇಂಡೋನೆಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಹಿಡಿದುಕೊಂಡರು.

ಪ್ರಧಾನಿ ಮೋದಿ ಅವರು ಸೆನೆಗಲ್ ಗಣರಾಜ್ಯದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್‌ಲ್ಯಾಂಡ್‌ನ ಪಿಎಂ ಮಾರ್ಕ್ ರುಟ್ಟೆ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬೈಡನ್ ಹಾಗೂ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರನ್ನು ಮಾಡಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.