ಮನೆ ಅಪರಾಧ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌’ಗೆ 750.54 ಕೋಟಿ ವಂಚನೆ: ದೂರು ದಾಖಲಿಸಿದ ಸಿಬಿಐ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌’ಗೆ 750.54 ಕೋಟಿ ವಂಚನೆ: ದೂರು ದಾಖಲಿಸಿದ ಸಿಬಿಐ

0

ನವದೆಹಲಿ(Newdelhi): ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ಸಂಬಂಧಿಸಿ 750.54 ಕೋಟಿ  ರೂ. ವಂಚನೆ ಆರೋಪದ ಮೇಲೆ ಕಾನ್ಪುರ ಮೂಲದ ರೊಟೊಮ್ಯಾಕ್ ಗ್ಲೋಬಲ್ ಕಂಪನಿ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಕಂಪನಿ ಮತ್ತು ಅದರ ನಿರ್ದೇಶಕರಾದ ಸಾಧನಾ ಕೊಠಾರಿ ಮತ್ತು ರಾಹುಲ್ ಕೊಠಾರಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಲೇಖನ ಸಾಮಗ್ರಿಗಳ ವ್ಯವಹಾರದಲ್ಲಿ ತೊಡಗಿರುವ ಕಂಪನಿಯು ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಏಳು ಬ್ಯಾಂಕ್‌ಗಳ ಒಕ್ಕೂಟಕ್ಕೆ ₹2,919 ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದೆ. ಇದರಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನದ್ದು ಶೇ 23 ರಷ್ಟು ಇದೆ.

ಒಕ್ಕೂಟದ ಸದಸ್ಯ ಬ್ಯಾಂಕ್‌ಗಳ ದೂರುಗಳ ಆಧಾರದ ಮೇಲೆ ಕಂಪನಿಯು ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆಗಳನ್ನು ಎದುರಿಸುತ್ತಿದೆ.