ಮನೆ ಸುದ್ದಿ ಜಾಲ ಬಸ್ ನಿಲ್ದಾಣ ವಿವಾದ: ತಪ್ಪಾಗಿದ್ದರೆ ಸಂಬಳದಿಂದ ಹಣ ಭರಿಸಲು ಸಿದ್ದ- ಶಾಸಕ ಎಸ್.ಎ.ರಾಮದಾಸ್

ಬಸ್ ನಿಲ್ದಾಣ ವಿವಾದ: ತಪ್ಪಾಗಿದ್ದರೆ ಸಂಬಳದಿಂದ ಹಣ ಭರಿಸಲು ಸಿದ್ದ- ಶಾಸಕ ಎಸ್.ಎ.ರಾಮದಾಸ್

0

ಮೈಸೂರು(Mysuru): ಬಸ್ ನಿಲ್ದಾಣದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ವಿವರವಾಗಿ ತಿಳಿಸಿದ್ದೇನೆ. ಈ ಕುರಿತಂತೆ ತಜ್ಞರ‌ ಸಮಿತಿ ಕಳುಹಿಸಲು ಮನವಿ‌ ಮಾಡಿದ್ದು, ಯಾವುದಾದರೂ ವಿವಾದ ಕಂಡುಬಂದಲ್ಲಿ ನಾನು ಕ್ಷಮೆ ಕೋರುತ್ತೇನೆ. ತಪ್ಪಾಗಿದ್ದರೆ ನಾನು ಆ ಹಣವನ್ನು ‌ಸಂಬಳದಿಂದ ಭರಿಸಲು ಸಿದ್ಧ ಎಂದು ಶಾಸಕ ರಾಮದಾಸ್ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ‌ಜಾಲತಾಣಗಳಲ್ಲಿ ತಪ್ಪು ‌ಮಾಹಿತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೂ ಪತ್ರ ಬರೆದು ವಿವರವಾಗಿ ತಿಳಿಸಿದ್ದೇನೆ. ಸಾಂಸ್ಕೃತಿಕ ನಗರಿಯಲ್ಲಿ ಅರಮನೆ ಮಾದರಿಯಲ್ಲಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ನಿಲ್ದಾಣದ ವಿನ್ಯಾಸ ‌ಮಾಡಲಾಗಿತ್ತು. ವಿವಾದ ಉಂಟುಮಾಡುವ ಉದ್ದೇಶವಿರಲಿಲ್ಲ ಎಂದು ತಿಳಿಸಿದರು.

ಸಮಸ್ಯೆ ಸೃಷ್ಟಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಬಸ್ ನಿಲ್ದಾಣ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರೆ, ಕೆಲಸ ನಿಲ್ಲಿಸಲಾಗುವುದು. ಕಾನೂನಿನ ಪ್ರಕಾರ, ನಿಲ್ದಾಣ ನಿರ್ಮಾಣಗೊಂಡಿದ್ದು, ಕೆಆರ್ ಐಡಿಎಲ್ ಕಾಮಗಾರಿ ನಿರ್ವಹಿಸಿದೆ ಎಂದರು.

ಹಿಂದಿನ ಲೇಖನಇಂಡಿಯನ್ ಓವರ್‌ಸೀಸ್ ಬ್ಯಾಂಕ್‌’ಗೆ 750.54 ಕೋಟಿ ವಂಚನೆ: ದೂರು ದಾಖಲಿಸಿದ ಸಿಬಿಐ
ಮುಂದಿನ ಲೇಖನವೋಟರ್ ಐಡಿ ನವೀಕರಣ ಮಾಡಿದ ಸಂಸ್ಥೆಗೆ ಬಿಬಿಎಂಪಿ ನೋಟಿಸ್