ಮಂಡ್ಯ(Mandya): ಹಿಂದೂ ಬಾಲಕಿಯ ಅಶ್ಲೀಲ ಚಿತ್ರ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿದ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಮದುವೆಯಾಗುವುದಾಗಿ ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಆರೋಪಿಯನ್ನು ಯೂನಸ್ ಪಾಷಾ(೨೫) ಎಂದು ಗುರುತಿಸಲಾಗಿದೆ.
೧೩ ವರ್ಷದ ಹಿಂದೂ ಧರ್ಮದ ಅಪ್ರಾಪ್ತ ಬಾಲಕಿಯ ಸ್ನೇಹ ಸಂಪಾದಿಸಿದ ಆರೋಪಿ ಪೋಷಕರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ .ಬಳಿಕ ವಿಡಿಯೋ ಕಾಲ್ ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ.
ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
ನವೆಂಬರ್ ೮ ರಂದು ಬಾಲಕಿಯ ತಂದೆ ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಬಾಲಕಿ ತೆರಳಿದ್ದಳು.
ನವೆಂಬರ್ ೧೧ ರಂದು ಬಾಲಕಿಗೆ ನಿದ್ದೆ ಮಾತ್ರೆ ಪುಡಿ ನೀಡಿ ತಾಯಿ ಹಾಗೂ ಅಜ್ಜಿಯ ಊಟದಲ್ಲಿ ಬೆರೆಸುವಂತೆ ಆರೋಪಿ ತಿಳಿಸಿದ್ದ. ಅಂದು ರಾತ್ರಿ ಮನೆಯೊಳಗೆ ಬಂದ ಆರೋಪಿ ಅತ್ಯಾಚಾರವೆಸಗಿದ್ದಾನೆ. ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಮದುವೆಯಾಗುವುದಾಗಿ ತಿಳಿಸಿದ್ದಾನೆ.
ನಂತರ ಬಾಲಕಿಯ ನಡವಳಿಕೆಯಲ್ಲಾದ ಬದಲಾವಣೆ ಕಂಡ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ನವೆಂಬರ್ ೧೯ ರಂದು ಬಾಲಕಿಯ ತಂದೆ ದೂರು ನೀಡಿದ್ದು, ಪೊಲೀಸರು ಯೂನಸ್ ಪಾಷಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.