ಮನೆ ಉದ್ಯೋಗ ನೈರುತ್ಯ ರೈಲ್ವೆಯ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನೈರುತ್ಯ ರೈಲ್ವೆಯ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ನೈರುತ್ಯ ರೈಲ್ವೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಕಲ್ಚರಲ್, ಸ್ಕೌಟ್ಸ್ & ಗೈಡ್ಸ್ ಕೋಟಾ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬೇಕು.

ಎಷ್ಟೆಷ್ಟು ಹುದ್ದೆಗಳಿವೆ?

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ತಬಲಾ))-1

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ಕೊಳಲು))-1

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-2)-3

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-1)-8

ಶೈಕ್ಷಣಿಕ ಅರ್ಹತೆ:

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ತಬಲಾ))- 12 ನೇ ತರಗತಿ

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ಕೊಳಲು))- 10ನೇ ತರಗತಿ

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-2)- 10ನೇ, 12ನೇ ತರಗತಿ

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-1)- 10ನೇ ತರಗತಿ, ITI

ವಯೋಮಿತಿ ಎಷ್ಟಿರಬೇಕು?

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ತಬಲಾ))- 18ರಿಂದ 30 ವರ್ಷ

ಕಲ್ಚರಲ್ ಕೋಟಾ (ಇನ್’ಸ್ಟ್ರುಮೆಂಟಲ್ (ಕೊಳಲು))-18ರಿಂದ 30 ವರ್ಷ

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-2)- 18ರಿಂದ 30 ವರ್ಷ

ಸ್ಕೌಟ್ಸ್ & ಗೈಡ್ಸ್ ಕೋಟಾ (ಲೆವೆಲ್-1)- 18ರಿಂದ 33 ವರ್ಷ

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳು: 3 ವರ್ಷ

ಎಸ್’ಸಿ/ಎಸ್ಟಿ ಅಭ್ಯರ್ಥಿಗಳು- 5 ವರ್ಷ

PWD ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ ಎಷ್ಟು?

ಎಸ್’ಸಿ/ಎಸ್’ಟಿ/ಮಾಜಿ ಸೈನಿಕ/ PWD/ ಮಹಿಳಾ, ಅಲ್ಪಸಂಖ್ಯಾತ & EBC ಅಭ್ಯರ್ಥಿಗಳು- 250 ರೂ.

ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ

ಪಾವತಿಸುವ ಬಗೆ: IPO

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 19, 2022ಕ್ಕೆ ಮುನ್ನ ಕಳುಹಿಸಬೇಕು.

ಅಸಿಸ್ಟೆಂಟ್ ಪರ್ಸನಲ್ ಆಫೀಸರ್/Rectt,

ರೈಲ್ವೆ ನೇಮಕಾತಿ ಸೆಲ್

ನೈರುತ್ಯ ರೈಲ್ವೆ

2ನೇ ಮಹಡಿ

ಹಳೇ ಜಿಎಂ ಕಚೇರಿ ಕಟ್ಟಡ

ಕ್ಲಬ್ ರೋಡ್

ಕೇಶ್ವಾಪುರ್

ಹುಬ್ಬಳ್ಳಿ-580023

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2022

ಅರ್ಜಿ ಸಲ್ಲಿಸಲು ಕೊನೆ ದಿನ: 19/12/2022