ಮನೆ ಆರೋಗ್ಯ ಚಳಿಗಾಲದಲ್ಲಿ ಎಳ್ಳು ಮತ್ತು ಎಳ್ಳೆಣ್ಣೆ: ಆರೋಗ್ಯಕ್ಕೆ ತುಂಬಾ ಸಹಾಯಕ

ಚಳಿಗಾಲದಲ್ಲಿ ಎಳ್ಳು ಮತ್ತು ಎಳ್ಳೆಣ್ಣೆ: ಆರೋಗ್ಯಕ್ಕೆ ತುಂಬಾ ಸಹಾಯಕ

0

ಮನುಷ್ಯ ಚಳಿಗಾಲದಲ್ಲಿ ಉಷ್ಣ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಬೇಸಿಗೆ ಕಾಲದಲ್ಲಿ ತಣ್ಣಗಿನ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದು ಆತನ ದೇಹದ ಪ್ರಕೃತಿಯ ಸಮತೋಲ ನದಲ್ಲಿ ನೆರವಾಗುತ್ತದೆ. ಈಗ ಚಳಿಗಾಲ ಆಗಿರುವುದರಿಂದ ದೇಹದ ಉಷ್ಣಾಂಶ ವನ್ನು ಕಾಪಾಡುವ ಆಹಾರಗಳನ್ನು ಸೇವಿಸುವ ನಿಟ್ಟಿನಲ್ಲಿ ನೋಡುವುದಾದರೆ ಎಳ್ಳು ತುಂಬಾ ಸಹಾಯಕ.

ಚಳಿಗಾಲದಲ್ಲಿ ಎಳ್ಳು ಸೇವನೆ

• ಏಕೆಂದರೆ ಚಳಿಗಾಲದಲ್ಲಿ ಎಳ್ಳು ಸೇವನೆಯಿಂದ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು. ಅದರ ಜೊತೆಗೆ ಬೇರೆ ಬೇರೆ ಬಗೆಯ ಆರೋಗ್ಯ ಪ್ರಯೋಜನಗಳು ಸಹ ಎಳ್ಳು ಅಥವಾ ಎಳ್ಳೆಣ್ಣೆಯಿಂದ ಲಭ್ಯವಾಗುತ್ತವೆ.

• ಪೌಷ್ಟಿಕ ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಹೇಳುವ ಹಾಗೆ ಎಳ್ಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವ ಜಿಂಕ್, ಸಲೇನಿಯಂ, ಕಾಪರ್, ಕಬ್ಬಿಣ, ವಿಟಮಿನ್ ಇ ಮತ್ತು ವಿಟಮಿನ್ ಬಿ6 ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ.

ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್

• ಅಷ್ಟೇ ಅಲ್ಲದೆ ಎಳ್ಳು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದ್ದು, ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳನ್ನು ಒಳಗೊಂಡಿದೆ.

• ಇದು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದು ಮಾತ್ರ ವಲ್ಲದೆ ನಮ್ಮ ದೇಹದ ಇನ್ಸುಲಿನ್ ಪ್ರಮಾಣ ಸರಿಯಾಗಿ ಬಳಕೆ ಆಗುವಂತೆ ನೋಡಿಕೊಂಡು ಯಾವುದೇ ಕಾರಣಕ್ಕೂ ಶುಗರ್ ಹೆಚ್ಚಾಗದಂತೆ ನಮ್ಮನ್ನು ಕಾಪಾಡುತ್ತದೆ.

ಎಳ್ಳಿನಲ್ಲಿ ಕಂಡು ಬರುವ ನಾರಿನಾಂಶ

• ಎಳ್ಳು ತನ್ನಲ್ಲಿ ನಾರಿನ ಅಂಶವನ್ನು ಯಥೇಚ್ಛವಾಗಿ ಒಳಗೊಂಡಿದ್ದು, ಸುಲಭವಾಗಿ ಜೀರ್ಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

• ನೋವು ಮತ್ತು ಉರಿಯುತವನ್ನು ಚಳಿಗಾಲದಲ್ಲಿ ಏಕಕಾಲಕ್ಕೆ ನಿವಾರಣೆ ಮಾಡುವ ಶಕ್ತಿ ಯನ್ನು ಎಳ್ಳು ಪಡೆದಿದೆ. ಇದರಲ್ಲಿ ಅಂತಹ ನೈಸರ್ಗಿಕ ರಾಸಾಯನಿಕ ಅಂಶಗಳು ಇರಲಿದ್ದು, ಬಯೋ ಆಕ್ಟಿವ್ ಕಾಂಪೌಂಡ್ ತರಹ ಕೆಲಸ ಮಾಡುತ್ತವೆ.

ಮಾನಸಿಕ ಆತಂಕ ಮತ್ತು ಖಿನ್ನತೆ

• ಎಳ್ಳು ನಿಮ್ಮ ಮಾನಸಿಕ ಆತಂಕವನ್ನು ಮತ್ತು ಖಿನ್ನತೆಯನ್ನು ದೂರ ಮಾಡಿ ತನ್ನ ಆಂಟಿ ಆಕ್ಸಿ ಡೆಂಟ್ ಗುಣ ಲಕ್ಷಣಗಳ ಸಹಾಯದಿಂದ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತದೆ ಮತ್ತು ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ತಾಜಾತನ ಮತ್ತು ಹುರುಪು ಕೊಡುತ್ತದೆ.

• ಹಾಗಾಗಿ ಈ ಚಳಿಗಾಲದಲ್ಲಿ ನೀವು ಅತ್ಯುತ್ತಮ ಆಹಾರ ಪದ್ಧತಿಯಲ್ಲಿ ಎಳ್ಳನ್ನು ಸಹ ಬಳಕೆ ಮಾಡಿ ಕೊಂಡು ಒಳ್ಳೆಯ ಆರೋಗ್ಯವನ್ನು ಕಂಡುಕೊಳ್ಳಬಹುದು.