ಮನೆ ಅಪರಾಧ ನಕಲಿ ಸಹಿ ಬಳಸಿ ಹಣ ದುರ್ಬಳಕೆ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್‍ಐಆರ್

ನಕಲಿ ಸಹಿ ಬಳಸಿ ಹಣ ದುರ್ಬಳಕೆ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್‍ಐಆರ್

0

ಹುಬ್ಬಳ್ಳಿ: ನಕಲಿ ಸಹಿ ಬಳಸಿ 35 ಲಕ್ಷ ರೂಪಾಯಿ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ನಕಲಿ ಸಹಿ  ಬಳಸಿ 7 ಜನರಿಗೆ ತಲಾ 5 ಲಕ್ಷ ರೂಪಾಯಿಯಂತೆ ಸಾಲ ವಿತರಿಸಲಾಗಿತ್ತು. ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ಟಿ.ಸಿ ಅವರು ಆರೋಪಿಗಳ ಜತೆ ಸೇರಿ ಸಾಲ ನೀಡಿದ್ದರು. ಒಟ್ಟು 8 ಜನರ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಕಲಿ ಸಹಿ ಮಾಡಿಸಿ, ಸಾಲ ಮಂಜೂರು ಮಾಡಿದ್ದರು. ಬ್ಯಾಂಕ್ ಸಾಲ ಮರುಪಾವತಿ ಆಗದ ಹಿನ್ನೆಲೆ, ಪ್ರಕರಣ ಬೆಳಕಿಗೆ ಬಂದಿತ್ತು.  ಮ್ಯಾನೇಜರ್​ ಮಾಡಿರೋ ಹಣ ದುರ್ಬಳಕೆ ವಿಚಾರ ತಿಳಿದ ಅದೇ ಬ್ಯಾಂಕ್ ಉದ್ಯೋಗಿಯೊಬ್ಬರು  ಕೇಶ್ವಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾಲ ಮರುಪಾವತಿ ಕುರಿತು ವಿಚಾರಣೆ ನಡೆಸಿದ ವೇಳೆ ಮ್ಯಾನೇಜರ್ ಮಾಡಿರೋ ಮೋಸ ಬಯಲಾಗಿದೆ.
ಹುಬ್ಬಳ್ಳಿಯಲ್ಲಿ ಗೆಳೆತನದ  ಹೆಸರಲ್ಲಿ  ಮಹಿಳೆಯಿಂದಲೇ ಮಹಿಳೆಗೆ ಈ ಮೋಸ ನಡೆದಿದೆ. ಗಂಗಮ್ಮ ಸಂಶಿ ಎಂಬಾಕೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ವಾಸ ಮಾಡುತ್ತಿರುವ ಇವರು ವಿದ್ಯಾನಗರದ ಅಕ್ಷಯ ಕಾಲೋನಿಯ ಶೋಭಾ ಅವರಿಂದ  ನವಲಗುಂದ ಅವರಿಂದ ವಂಚನೆಗೆ ಒಳಗಾಗಿದ್ದಾರೆ.  ಕಳೆದ 2018 ರಿಂದಲೂ ಶೋಭಾ ಅವರನ್ನು ನಂಬಿ ಹಲವು ವ್ಯವಹಾರ ನಡೆಸಿಕೊಂಡು ಬಂದಿದ್ದ ಶೋಭಾ ಅವರಿಗೆ ಗೆಳೆತನದ ಮರಳು ಮಾತುಗಳ ಜೊತೆಗೆ ವ್ಯವಹಾರದ ಲಾಭ ತೋರಿಸಿ 40 ಲಕ್ಷ ಮೋಸ ಮಾಡಿದ್ದಾರೆ.
ಖಾಸಗಿ ಬ್ಯಾಂಕ್ ವೊಂದರಿಂದ ಈಕೆಯ ಮನೆಯ ಮೇಲೆ ಸಾಲ ಕೊಡಿಸುವುದಾಗಿ ಶೋಭಾ ಬ್ಯಾಂಕಿಗೆ ಅರ್ಜಿ ಹಾಕಿಸಿದ್ದಾರೆ. ಆದರೆ ಗಂಗಮ್ಮ ಅವರಿಗೆ ಆ ಬ್ಯಾಂಕಿನಿಂದ ಯಾವುದೇ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಶೋಭಾ ತನ್ನ ಮನೆಯ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿದ್ದಾಳೆ. ಇದಕ್ಕೂ ಮುನ್ನ ಗಂಗಮ್ಮ ಅವರ ಮನೆಯನ್ನು ಸಾಲದ ಭದ್ರತೆಯ ನೆಪದಲ್ಲಿ ಗಂಗಮ್ಮ ಅವರಿಂದ ಮನೆಯ ಮಾರಾಟದ  ಸಂಪೂರ್ಣ ಕರಾರು ಪತ್ರ ಬರೆಯಿಸಿಕೊಂಡಿದ್ದಾರೆ. ಆದರೆ ಕರಾರು ಪತ್ರ ಬರೆಯಿಸಿಕೊಂಡ ನಂತರ ಒಂದು ಬಿಡಿಗಾಸು ನೀಡದ ಶೋಭಾ, ಇದೀಗ 40 ಲಕ್ಷ ರೂಪಾಯಿ ಸಾಲ ತಿರುಗಿಸುವಂತೆ ಪೀಡಿಸುತ್ತಿದ್ದಾಳೆ ಎಂದು ಗಂಗಮ್ಮ ಆರೋಪಿಸಿದ್ದಾಳೆ.
ಶೋಭಾ ಮಾಡುತ್ತಿರುವ ವಂಚನೆ ವಿರುದ್ಧ ಗಂಗಮ್ಮ ಸೇರಿ ಇತರೆ ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಿಂದಿನ ಲೇಖನಮಾ.9 ರಿಂದ ಮೇಲುಕೋಟೆ ವೈರಮುಡಿ‌ ಉತ್ಸವ
ಮುಂದಿನ ಲೇಖನಮೊದಲ ಟೆಸ್ಟ್ ಪಂದ್ಯ: ಶ್ರೀಲಂಕಾ ವಿರುದ್ಧ 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ