ಮನೆ ರಾಷ್ಟ್ರೀಯ ಗುಜರಾತ್‌ ಜನ ಶಕ್ತಿಗೆ ತಲೆಬಾಗುತ್ತೇನೆ: ಪ್ರಧಾನಿ ನರೇಂದ್ರ ಮೋದಿ

ಗುಜರಾತ್‌ ಜನ ಶಕ್ತಿಗೆ ತಲೆಬಾಗುತ್ತೇನೆ: ಪ್ರಧಾನಿ ನರೇಂದ್ರ ಮೋದಿ

0

ನವದೆಹಲಿ(Newdelhi): ಗುಜರಾತ್‌ಗೆ ಧನ್ಯವಾದಗಳು. ಅಭೂತಪೂರ್ವ ಚುನಾವಣಾ ಫಲಿತಾಂಶ ಕಂಡು ಭಾವುಕನಾಗಿದ್ದೇನೆ. ಅಭಿವೃದ್ಧಿಗಾಗಿನ ರಾಜಕೀಯಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ ಮತ್ತು ಇದೇ ರೀತಿ ಮುಂದುವರಿಯುವುದನ್ನು ಬಯಸಿದ್ದಾರೆ. ಗುಜರಾತ್‌ ಜನ ಶಕ್ತಿಗೆ ತಲೆಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದತ್ತ ಮುನ್ನುಗ್ಗುತ್ತಿದೆ. ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ್ದಾರೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆ ಚುನಾವಣೆಯಗೆ ಡಿಸೆಂಬರ್‌ 1 ಮತ್ತು 5ರಂದು ಎರಡು ಹಂತಗಳಲ್ಲಿ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಸದ್ಯ ಬಿಜೆಪಿ 135, ಕಾಂಗ್ರೆಸ್‌ 12 ಎಎಪಿ 4 ಹಾಗೂ ಇತರರು 4 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.ಬಿಜೆಪಿ ಸತತ 7ನೇ ಬಾರಿಗೆ ಅಧಿಕಾರಕ್ಕೇರುವ ತವಕದಲ್ಲಿದ್ದು, ಮೋದಿ ಟ್ವೀಟ್‌ ಮಾಡಿ ಜನರಿಗೆ ಧನ್ಯವಾದ ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿದ ಕಾರ್ಯಕರ್ತರಿಗೆ ಧನ್ಯವಾದ ಹೇಳಿರುವ ಮೋದಿ, ಪ್ರತಿಯೊಬ್ಬರೂ ಚಾಂಪಿಯನ್‌ಗಳು ಎಂದು ಗುಜರಾತ್‌ನ ಎಲ್ಲ ಪರಿಶ್ರಮಿ ಕಾರ್ಯಕರ್ತರಿಗೂ ಹೇಳಲು ಬಯಸುತ್ತೇನೆ. ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ಕಾರ್ಯಕರ್ತರ ಅಸಾಧಾರಣ ಶ್ರಮವಿಲ್ಲದೆ ಈ ಐತಿಹಾಸಿಕ ಜಯ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.