ಮನೆ ರಾಷ್ಟ್ರೀಯ ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಮದರಸಾಗಳ ಬಗ್ಗೆ ತನಿಖೆಗೆ ಎನ್’ಸಿಪಿಸಿಆರ್ ಸೂಚನೆ

ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಮದರಸಾಗಳ ಬಗ್ಗೆ ತನಿಖೆಗೆ ಎನ್’ಸಿಪಿಸಿಆರ್ ಸೂಚನೆ

0

ನವದೆಹಲಿ(Newdelhi): ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ/ಮಾನ್ಯತೆ ಪಡೆದ ಮದರಸಾಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್’ಸಿಪಿಸಿಆರ್) ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಯು ಮ್ಯಾಪ್ ಮಾಡದ ಎಲ್ಲಾ ಮದರಸಾಗಳ ಮ್ಯಾಪಿಂಗ್ ಮಾಡಬೇಕು ಎಂದು ಆದೇಶ ಹೊರಡಿಸಿದೆ.

ಎನ್’ಸಿಪಿಸಿಆರ್’ನ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಈ ಕುರಿತು ಮಾತನಾಡಿ, ಇಸ್ಲಾಂ ಹೊರತುಪಡಿಸಿ ಇತರ ಧರ್ಮದ ವಿದ್ಯಾರ್ಥಿಗಳು ಸಹ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೆಲವು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಅವರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ ಎಂಬುದು ಆಯೋಗದ ಗಮನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಇದು ಸಂವಿಧಾನದ 28 (3) ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳನ್ನು ಯಾವುದೇ ಧಾರ್ಮಿಕ ಬೋಧನೆಯಲ್ಲಿ ಭಾಗವಹಿಸಲು ಶಿಕ್ಷಣ ಸಂಸ್ಥೆಗಳನ್ನು ನಿರ್ಬಂಧಿಸುವುದನ್ನು ನಿಷೇಧಿಸುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು 30 ದಿನಗಳಲ್ಲಿ ರಾಜ್ಯಗಳಿಂದ ಕ್ರಮ ಕೈಗೊಂಡ ವರದಿಯನ್ನು ಆಯೋಗ ಕೇಳಿದೆ.