ಮನೆ ಕ್ರೀಡೆ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಎಚ್‌.ಎಸ್‌. ಪ್ರಣಯ್’ಗೆ ಜಯ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಎಚ್‌.ಎಸ್‌. ಪ್ರಣಯ್’ಗೆ ಜಯ

0

ಬ್ಯಾಂಕಾಕ್‌(Bangkok): ಭಾರತದ ಎಚ್‌.ಎಸ್‌. ಪ್ರಣಯ್ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಂತಿಮವಾಗಿ ಜಯ ಗಳಿಸಿದ್ದಾರೆ.

ಶುಕ್ರವಾರ ಪ್ರಣಯ್‌ 14–21, 21–17, 21–18ರಿಂದ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ, ಒಲಿಂಪಿಕ್ ಚಾಂಪಿಯನ್‌ ವಿಕ್ಟರ್ ಅಕ್ಸೆಲ್ಸೆನ್‌ ಅವರಿಗೆ ಆಘಾತ ನೀಡಿದರು.

ಆದರೆ ಎ ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಕಾರಣ ಅವರು ಈಗಾಗಲೇ ಸೆಮಿಫೈನಲ್‌ ಅರ್ಹತೆಯಿಂದ ಹೊರಬಿದ್ದಿದ್ದರು. ಅಭಿಯಾನ ಅಂತ್ಯಗೊಳಿಸುವ ಮೊದಲು ಡೆನ್ಮಾರ್ಕ್‌’ನ ಪ್ರಮುಖ ಆಟಗಾರನನ್ನು ಮಣಿಸಿದ ಸಮಾಧಾನ ಅವರದಾಯಿತು.

51 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಅಕ್ಸೆಲ್ಸೆನ್‌ ವಿರುದ್ಧ ಪ್ರಣಯ್ ಅವರಿಗೆ ಇದು ಎರಡನೇ ಜಯವಾಗಿದೆ. ಕಳೆದ ವರ್ಷ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತದ ಆಟಗಾರ ಗೆದ್ದಿದ್ದರು. ಆದರೆ ಮುಖಾಮುಖಿಯಾದ ಒಟ್ಟು ಏಳು ಪಂದ್ಯಗಳಲ್ಲಿ ಡೆನ್ಮಾರ್ಕ್ ಆಟಗಾರ ಐದು ಬಾರಿ ಮೇಲುಗೈ ಸಾಧಿಸಿದ್ದಾರೆ.

ಗುಂಪಿನ ಎರಡನೇ ಪಂದ್ಯದಲ್ಲಿ ಪ್ರಣಯ್‌ 21-23, 21-17, 19-21ರಿಂದ ಚೀನಾದ ಲು ಗುವಾಂಗ್‌ ಜು ವಿರುದ್ಧ ಸೋತಿದ್ದರು. ದೇಶದ ಸ್ಪರ್ಧಿಯಾಗಿ ಪ್ರಣಯ್ ಒಬ್ಬರೇ ಇದ್ದುದರಿಂದ ಅವರ ಸೋಲಿನೊಂದಿಗೆ ಭಾರತದ ಅಭಿಯಾನ ಅಂತ್ಯವಾಯಿತು.

ಹಿಂದಿನ ಲೇಖನಮೈಸೂರಿನಲ್ಲಿ ಸಾಕ್ಷ್ಯಚಿತ್ರೋತ್ಸವ ಆಯೋಜಿಸಲು ಸರ್ಕಾರಕ್ಕೆ ಪ್ರಸ್ತಾವ: ಅಶೋಕ್‌ ಕಶ್ಯ‍ಪ್‌
ಮುಂದಿನ ಲೇಖನಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಮದರಸಾಗಳ ಬಗ್ಗೆ ತನಿಖೆಗೆ ಎನ್’ಸಿಪಿಸಿಆರ್ ಸೂಚನೆ