ಮನೆ ರಾಜ್ಯ 17 ಡಿವೈಎಸ್’ಪಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

17 ಡಿವೈಎಸ್’ಪಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

0

ಬೆಂಗಳೂರು(Bengaluru): ಹೈಕೋರ್ಟ್ ತೀರ್ಪಿನ ಮೇರೆಗೆ ರಾಜ್ಯ ಸರ್ಕಾರ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತವನ್ನು ಮರು ಸ್ಥಾಪಿಸಿತ್ತು. ಅಂತೆಯೇ ನೂತನ ಡಿವೈಎಸ್’ಪಿಗಳನ್ನು ನೇಮಕ ಮಾಡಿ ಲೋಕಾಯುಕ್ತಕ್ಕೆ ಸರ್ಕಾರ ಬಲ ತುಂಬಿದೆ.

17 ಡಿವೈಎಸ್’ಪಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ 15 ಅಧಿಕಾರಿಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ಸರ್ಕಾರ ನೇಮಕ ಮಾಡಿ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳಲ್ಲಿ ಬಹುತೇಕರು ಭ್ರಷ್ಟಚಾರ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸಿದ್ದವರಾಗಿದ್ದಾರೆ. ಎಸಿಬಿ ರದ್ದುಗೊಳಿಸಿದ ಬಳಿಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ 17 ಡಿವೈಎಸ್’ಪಿಗಳ ಪಟ್ಟಿ ಇಂತಿದೆ.

ಭ್ರಷ್ಟಚಾರ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮಾಶಂಕರ್.ಜಿ, ಮಂಜುನಾಥ್ ಕೆ.ಗಂಗಲ್, ಸುರೇಶ್ ರೆಡ್ಡ ಎಂ.ಎಸ್, ಮಲ್ಲಿಕಾರ್ಜುನ ಸಿ.ಎಸ್, ಹನುಮಂತರಾಯ ಶ್ರೀಮಂತರಾಯ, ಮ್ಯಾಥ್ಯೂ ಥಾಮಸ್.ಕೆ.ಟಿ, ಉಮೇಶ್ ಈಶ್ವರ್ ನಾಯಕ್, ಪ್ರಕಾಶ್.ಕೆ.ಸಿ, ಸುನೀಲ್ ಕುಮಾರ್ ಹೆಚ್.ಟಿ, ಸೂರ್ಯನಾರಾಯಣ ರಾವ್.ವಿ, ಸುಧೀರ್.ಎಸ್., ದಾವಣೆಗೆರೆ ಪೂರ್ವ ವಲಯ ಐಜಿಪಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭರತ್ ರೆಡ್ಡಿ.ಎ.ಆರ್, ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ಬಿರಾದಾರ್, ಬೆಂಗಳೂರು ಕೇಂದ್ರ ವಲಯ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್.ಬಿ, ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿರೇಂದ್ರ ಕುಮಾರ್.ಪಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಉಳಿದಂತೆ ಬಳ್ಳಾರಿಯ ಡಿಸಿಆರ್’ಬಿಯಿಂದ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶದಲ್ಲಿದ್ದ ಮಲ್ಲೇಶ್ ದೊಡ್ಡಮನಿ ಅವರನ್ನು ದಾವಣಗೆರೆ ನಗರ ಉಪ ವಿಭಾಗಕ್ಕೆ ಹಾಗೂ ಬೆಂಗಳೂರು ಪ್ರೇಜರ್ ಟೌನ್ ಉಪ ವಿಭಾಗದಿಂದ ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಅಬ್ದುಲ್ ಖಾದರ್ ಬಿ.ಎಸ್ ಅವರನ್ನು ಬೆಂಗಳೂರು ನಗರ ಸಂಚಾರ ಮತ್ತು ರಸ್ತೆ ಸುರಕ್ಷತಾ ಕೋಶಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.