ಮನೆ ರಾಜಕೀಯ ಮುಖ್ಯಮಂತ್ರಿ ಸ್ಥಾನಕ್ಕೆ ಚನ್ನಿ ಯೋಗ್ಯರಲ್ಲ: ಅಮರಿಂದರ್ ಸಿಂಗ್

ಮುಖ್ಯಮಂತ್ರಿ ಸ್ಥಾನಕ್ಕೆ ಚನ್ನಿ ಯೋಗ್ಯರಲ್ಲ: ಅಮರಿಂದರ್ ಸಿಂಗ್

0

ಪಟಿಯಾಲ: ಪಂಜಾಬ್ ಹಿಂದೆಂದೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಿಭಜನೆಯಾಗಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಚನ್ನಿ ಯೋಗ್ಯರಲ್ಲ ಎಂದು ಮಾಜಿ ಸಿಎಂ, ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರಿಂದರ್ ಸಿಂಗ್ ಆರೋಪ ಮಾಡಿದ್ದಾರೆ.

 ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ತಪ್ಪು ಮಾಡಿದೆ ಎಂದು ಟೀಕಿಸಿದ್ದಾರೆ.

ಸಿಎಂ ಆಗಿದ್ದ 111 ದಿನಗಳಲ್ಲಿ ಎಲ್ಲವನ್ನೂ ಮಾಡಿದ್ದೇನೆ ಎಂದು ಚನ್ನಿ ಹೇಳಿಕೊಂಡಿದ್ದಾರೆ. ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಪ್ರತಿಯೊಂದು ಯೋಜನೆಯನ್ನು ಪ್ರಾರಂಭಿಸಲು ತಿಂಗಳುಗಳು ಬೇಕಾಗುತ್ತದೆ. ಈ ಕುರಿತು ಜನರು ಎಚ್ಚರವಾಗಿರಬೇಕು. ಚನ್ನಿ ಹೇಳಿರುವ ಎಲ್ಲ ಯೋಜನೆಗಳು ನಮ್ಮ ಸರ್ಕಾರದಿಂದ ಆರಂಭವಾಗಿತ್ತು ಎಂದು ಹೇಳಿದರು.

ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಆದರೆ ಜಾತಿ ಆಧಾರದಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಬಾರದು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸದ್ಯದಲ್ಲೇ ಬಂಡಾಯ ಏಳುವುದಾಗಿ ಎಚ್ಚರಿಸಿದರು.

ಪಂಜಾಬ್‌ನ ಉತ್ತಮ ಭವಿಷ್ಯಕ್ಕಾಗಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಹಿಂದಿನ ಲೇಖನಹಿಜಾಬ್ ಕಾರಣಕ್ಕೆ ಕಾಲೇಜು ಪ್ರವೇಶ ನಿರ್ಬಂಧಿಸುವುದು ಭಯಾನಕ: ಮಲಾಲ
ಮುಂದಿನ ಲೇಖನಐವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​; ತಂಗಿಯ ಗಂಡನೊಂದಿಗಿನ ಅಕ್ರಮ ಸಂಬಂಧಕ್ಕೆ ಕುಟುಂಬವೇ ಬಲಿ