ದೇವ ಮಾದೇವ ಬಾರೋ
ಸ್ವಾಮಿ ಮಲಯ ಮಾದೇವ ಬಾರೋ ||ದೇವ||
ಏಳೇಳು ಮಲೆಯ ಮೆರೆದೂ
ನಡುಮಲೆಯಲ್ಲಿ ನೆಲೆಗೊಂಡು||ಏಳೇಳು||
ನಗುನಗುತ ಕುಳಿತಿರುವ
||ದೇವ||
ಚೆಲುವಾದ ಗಿರಿಯವನೇ ಸ್ವಾಮಿ ಚಿನ್ನಾದತೇರಿನವನೇ
ಎಪ್ಪತ್ತೇಳು ಮಲೆಯ ಒಡೆಯ ಎಣ್ಣೆಮಜ್ಜನಪ್ರಿಯ
ಹಾಲಡವಿಯಾ ಮೇಲೆ ವಾಲಾಡುವಾ ಸ್ವಾಮಿ
ಗಂಡುಲಿಯಾ ಬೆನ್ನೇರಿ ಮೆರೆದಾಡುವಾ ಸ್ವಾಮಿ
ದೇವಾಧಿದೇವರನೇ
ಕಾಪಾಡಿದ ಸ್ವಾಮಿ||ದೇವ||
ಅನವರತ ನಿನ್ನ ಲೀಲೆ ಹಾಡುವೆ ದಯೆಯಿರಲಿ
ನನ್ನ ಮೇಲೆ
ಈ ಬಡವನಾ ಮೊರೆಗೇ ಒಲಿದೂ ಬಾರಯ್ಯ
ನನ್ನ ಮನೆಗೆ
ಬಾಳಲ್ಲಿ ಬಲುನೊಂದು ಬಳಲಿರುವೇನೂ ತಂದೆ
ಧೀನದಯಾಸಿಂಧು
ನೀನೇ ಗತಿಯು ಮುಂದೆ ನೀ ಬಂದು ನನ್ನೊಮ್ಮೆ
ಹರಸೆಂದು ಬೇಡುವೆ
||ದೇವ||
ಏಳೇಳು ಮಲೆಯ ಮೆರೆದು ನಡುಮಲೆಯಲಿ
ನೆಲೆಗೊಂಡು ||ಏಳೇಳು||
ನಗುನಗುತ ಕುಳಿತಿರುವ
||ದೇವ|