ಮನೆ ರಾಜ್ಯ ಮೈಸೂರು: ಅರಮನೆಗೆ ತೆರಳಿ ಯದುವೀರ್’ಗೆ ಬಿ ಫಾರಂ ನೀಡಿದ ಬಿಜೆಪಿ ಮುಖಂಡರು

ಮೈಸೂರು: ಅರಮನೆಗೆ ತೆರಳಿ ಯದುವೀರ್’ಗೆ ಬಿ ಫಾರಂ ನೀಡಿದ ಬಿಜೆಪಿ ಮುಖಂಡರು

0

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ‌ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಮುಖಂಡರು ಮೈಸೂರು ಅರಮನೆಯಲ್ಲಿ ಸೋಮವಾರ ‘ಬಿ ಫಾರಂ’ ವಿತರಿಸಿದರು.

Join Our Whatsapp Group

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಗ್ರಾಮಾಂತರ ‌ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಶಾಸಕರಾದ ಪ್ರೀತಂ ಗೌಡ, ಎಸ್‌.ರಾಮದಾಸ್, ವಿಧಾನಪರಿಷತ್ ಮಾಜಿ‌ ಸದಸ್ಯ ಬಿ.ಸಿದ್ದರಾಜು, ಯದುವೀರ್ ತಾಯಿ ಪ್ರಮೋದಾದೇವಿ ಒಡೆಯರ್ ಹಾಗೂ ಮುಖಂಡ ಮಹೇಶ್ ಪಾಲ್ಗೊಂಡಿದ್ದರು.

ಯದುವೀರ್ ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ.

ಹಿಂದಿನ ಲೇಖನಜಲ್​ ಪೈಗುರಿ ಜಿಲ್ಲೆಯಲ್ಲಿ ಭೀಕರ ಬಿರುಗಾಳಿ: ಐವರ ಸಾವು, 500ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂದಿನ ಲೇಖನಬಳ್ಳಾರಿಯಲ್ಲಿ ಬಿಸಿಗಾಳಿ ಅಬ್ಬರ; 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು