Saval TV on YouTube
ನವದೆಹಲಿ(Newdelhi): ದೇಶದಲ್ಲಿ ಒಮೈಕ್ರಾನ್ ಉಪತಳಿಗಳ ಪತ್ತೆ ಹಿನ್ನಲೆಯಲ್ಲಿ ಗುರುವಾರ ಸಂಸದರು ಅಧಿವೇಶನಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ದೃಶ್ಯ ಕಂಡುಬಂತು.
Saval TV on YouTube
ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಮಾಸ್ಕ್ ಧರಿಸಿ ಕಲಾಪವನ್ನು ಪ್ರಾರಂಭಿಸಿದರು. ಹಲವು ಸಂಸದರು ಕೂಡ ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದರು.
ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ, ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ನಿಯಮ ಪಾಲನೆ ಮಾಡುವುದರ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ಸೂಚನೆ ನೀಡಿದರು.
ಸಾಂಕ್ರಮಿಕ ರೋಗದ ಈ ಹಿಂದಿನ ಅನುಭವಗಳನ್ನು ಕಂಡು ನಾವು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ಅಲ್ಲದೇ ಪ್ರವೇಶ ದ್ವಾರಗಳಲ್ಲಿ ಸದಸ್ಯರಿಗೆ ಮಾಸ್ಕ್ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.