Saval TV on YouTube
ಶಿವಮೊಗ್ಗ(Shivamogga): ಕಳೆದ 4 ದಿನಗಳ ಹಿಂದೆ ವಿದೇಶದಿಂದ ಬಂದ ಜಿಲ್ಲೆಗೆ ಹಿಂತಿರುಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಹೋಮ್ ಐಸೋಲೇಷನ್ಗೆ ಒಳಪಡಿಸಲಾಗಿದೆ.
ಶಿವಮೊಗ್ಗ ಮೂಲದ ವ್ಯಕ್ತಿ ವಿದೇಶದಿಂದ ಬಂದಾಗ ಬೆಂಗಳೂರು ಏರ್’ಪೋರ್ಟ್’ನಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಜಿಲ್ಲೆ ತಲುಪಿದ ನಂತರ ಪಾಸಿಟಿವ್ ಎಂದು ವರದಿ ಬಂದಿದ್ದು, ಸೋಂಕಿತನ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಉಳಿದಂತೆ ಜಿಲ್ಲೆಯಲ್ಲಿ 34 ಜನರನ್ನು ಪರೀಕ್ಷಿಸಿದಾಗ ಇಬ್ಬರಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಹೋಂ ಐಸೋಲೇಷನ್’ನಲ್ಲಿ ಇಡಲಾಗಿದೆ. ಈಗಾಗಲೇ ಜಿಲ್ಲಾ ಮೆಗ್ಗಾನ್ ಭೋದನಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್’ಗಳನ್ನು ತೆರೆಯಲಾಗಿದೆ.














