ಮನೆ ಆರೋಗ್ಯ ಶಿವಮೊಗ್ಗ: ವಿದೇಶದಿಂದ ಹಿಂತಿರುಗಿದ್ದ ವ್ಯಕ್ತಿಗೆ ಕೊರೊನಾ ದೃಢ: ಹೋಮ್ ಐಸೋಲೇಷನ್

ಶಿವಮೊಗ್ಗ: ವಿದೇಶದಿಂದ ಹಿಂತಿರುಗಿದ್ದ ವ್ಯಕ್ತಿಗೆ ಕೊರೊನಾ ದೃಢ: ಹೋಮ್ ಐಸೋಲೇಷನ್

0

ಶಿವಮೊಗ್ಗ(Shivamogga): ಕಳೆದ 4 ದಿನಗಳ ಹಿಂದೆ ವಿದೇಶದಿಂದ ಬಂದ ಜಿಲ್ಲೆಗೆ ಹಿಂತಿರುಗಿದ್ದ ವ್ಯಕ್ತಿಯಲ್ಲಿ‌ ಕೊರೊನಾ ಸೋಂಕು ಕಂಡುಬಂದಿದ್ದು, ಹೋಮ್​ ಐಸೋಲೇಷನ್​ಗೆ ಒಳಪಡಿಸಲಾಗಿದೆ.

ಶಿವಮೊಗ್ಗ ಮೂಲದ ವ್ಯಕ್ತಿ ವಿದೇಶದಿಂದ ಬಂದಾಗ ಬೆಂಗಳೂರು ಏರ್​’ಪೋರ್ಟ್’​ನಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಜಿಲ್ಲೆ ತಲುಪಿದ ನಂತರ ಪಾಸಿಟಿವ್ ಎಂದು ವರದಿ ಬಂದಿದ್ದು, ಸೋಂಕಿತನ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಉಳಿದಂತೆ ಜಿಲ್ಲೆಯಲ್ಲಿ 34 ಜನರನ್ನು ಪರೀಕ್ಷಿಸಿದಾಗ ಇಬ್ಬರಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಹೋಂ ಐಸೋಲೇಷನ್’​ನಲ್ಲಿ ಇಡಲಾಗಿದೆ. ಈಗಾಗಲೇ ಜಿಲ್ಲಾ‌ ಮೆಗ್ಗಾನ್ ಭೋದನಾಸ್ಪತ್ರೆಯಲ್ಲಿ ಕೋವಿಡ್ ವಾರ್ಡ್​’ಗಳನ್ನು ತೆರೆಯಲಾಗಿದೆ.

ಹಿಂದಿನ ಲೇಖನಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಬೇಡ: ಹೇಳಿಕೆ ನೀಡಿ  ಕಕ್ಕಾಬಿಕ್ಕಿಯಾದ ಸಚಿವ ಆರ್.ಅಶೋಕ್
ಮುಂದಿನ ಲೇಖನಉತ್ತಮ ಕೆಲಸ ಮಾಡಿದ ಪೊಲೀಸರಿಗೆ ಪ್ರವಾಸ, ಸಿನಿಮಾ ಟಿಕೆಟ್ ಉಡುಗೊರೆ