ಮನೆ ಆರೋಗ್ಯ ಕೋವಿಡ್: ಮುಂದಿನ 40 ದಿನ ಭಾರತಕ್ಕೆ ನಿರ್ಣಾಯಕ

ಕೋವಿಡ್: ಮುಂದಿನ 40 ದಿನ ಭಾರತಕ್ಕೆ ನಿರ್ಣಾಯಕ

0

ನವದೆಹಲಿ(Newdelhi): ದೇಶದಲ್ಲಿ ಕೋವಿಡ್​ ಸೋಂಕಿನ ಬಿಎಫ್.7 ರೂಪಾಂತರದ ಭೀತಿ ಹೆಚ್ಚಾಗಿರುವ ನಡುವೆ ಈ ವೈರಾಣು ಕುರಿತಾಗಿ ಮುಂದಿನ ಮುಂದಿನ 40 ದಿನ ಭಾರತಕ್ಕೆ ನಿರ್ಣಾಯಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರೂಪಾಂತರವು ಭಾರತಕ್ಕೂ ಕಾಲಿಡಬಹುದು ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತಾಗಿ ಸಕಲ ಸಿದ್ದತೆ ನಡೆಸಿದೆ. ಜನವರಿ ಮಧ್ಯ ಭಾಗದ ವೇಳೆಗೆ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಇನ್ನು ಚೀನಾದಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಕೋವಿಡ್ ಆರ್‌’ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ. ಚೀನಾ ಹಾಗೂ ಇನ್ನಿತರ ಭಾಗಗಳಿಂದ ಬರುವ ಜನತೆಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲು ಮುಂದಿನ ವಾರ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಕಳೆದ 2 ದಿನಗಳಲ್ಲಿ ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಟ್ಟು 6 ಸಾವಿರ ಮಂದಿಯನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 39 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದಿಲ್ಲಿ ಏರ್‌’ಪೋರ್ಟ್‌’ಗೆ ಗುರುವಾರ ಕೇಂದ್ರ ಆರೋಗ್ಯ ಸಚಿವರು ಭೇಟಿ ನೀಡಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನದ ವೇಳೆ ನಡೆಯುತ್ತಿರುವ ಕೊರೊನಾ ಪರೀಕ್ಷೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.