ಮನೆ ಸುದ್ದಿ ಜಾಲ ಪ್ರಕೃತಿಯಲ್ಲಿ ದೇವರನ್ನು ಕಂಡವರು ಕುವೆಂಪು: ಡಾ.ಹೆಚ್ ಎಸ್ ಸತ್ಯನಾರಾಯಣ

ಪ್ರಕೃತಿಯಲ್ಲಿ ದೇವರನ್ನು ಕಂಡವರು ಕುವೆಂಪು: ಡಾ.ಹೆಚ್ ಎಸ್ ಸತ್ಯನಾರಾಯಣ

0

ಮೈಸೂರು(Mysuru): ಕುವೆಂಪು ಪ್ರಕೃತಿಯಲ್ಲಿ ದೇವರನ್ನು ಕಂಡವರು, ದಮನಿತರನ್ನು ಶೋಷಿತರನ್ನು ಮೇಲುತ್ತುವಲ್ಲಿ ಅವರ ವಿಚಾರವಾದ ಅಮೋಘವಾದದ್ದು ಎಂದು ಸಾಹಿತ್ಯ ವಿಮರ್ಶಕರಾದ ಡಾ.ಹೆಚ್ ಎಸ್ ಸತ್ಯನಾರಾಯಣ ತಿಳಿಸಿದರು.


ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯನ್ನು ಕುರಿತು ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪುರವರು ಇಂದಿಗೂ ಅವರ ಸಾಹಿತ್ಯ ಸಂಪತ್ತಿನಿಂದ ಜೀವಂತವಾಗಿದ್ದಾರೆ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ಮಾತನ್ನು, ನಾವು ಮಾಡುವ ಕೆಲಸದಲ್ಲಿ ದೇವನಿರುತ್ತಾನೆ ಎಂಬುವ ನಂಬಿಕೆಯ ಮೂಲಕ ಸಾಕ್ಷಾತ್ಕಾರಗೊಳಿಸಿದವರು ಕುವೆಂಪು ಎಂದರು.
ಇಂದು ನಾವೆಲ್ಲರೂ ಪಠ್ಯದ ಮೂಲಕ ಕುವೆಂಪುರವರನ್ನು ಎದೆಗಪ್ಪಿಕೊಂಡಿದ್ದೇವೆ. ಕಾವ್ಯಕ್ಕೆ ಜಾತಿ ಸಂಸ್ಕಾರಗಳ ಬೇಲಿ ಇಲ್ಲ. ಸಾಹಿತ್ಯ ಎಲ್ಲವನ್ನು ಒಳಗೊಳ್ಳುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಕುವೆಂಪು ಬಾಲ್ಯದಲ್ಲಿಯೇ ಆಲೋಚಿಸುವ ಮತ್ತು ಪ್ರಶ್ನಿಸುವ ಶಕ್ತಿಯನ್ನು ಹೊಂದಿದ್ದರು ಮತ್ತು ಮೌಢ್ಯವನ್ನು ವಿರೋಧಿಸಿದ್ದರು. ಯುಗದ ಕವಿ, ಜಗದ ಕವಿ, ರಸ ಋಷಿ ಇಂತೆಲ್ಲಾ ಕರೆಸಿಕೊಳ್ಳುವ ಕವಿ ಕುವೆಂಪುರವರ 118ನೇ ಜನ್ಮದಿನವನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಜರ್ಮನ್ ನಂತಹ ಇತರೆ ರಾಷ್ಟ್ರಗಳಲ್ಲಿಯೂ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೆ ವಿ ಪ್ರಿಯಾ ಮತ್ತು ತಂಡದವರು ಕುವೆಂಪು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯತ್‌’ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪೂರ್ಣಿಮ ಬಿ ಆರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರದ ಶಿವಕುಮಾರ್‌  ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾ ಪೌರರಾದ ಡಾ. ಜಿ ರೂಪ ರವರನ್ನು ಒಳಗೊಂಡಂತೆ ಇತರೆ ಗಣ್ಯರು ಭಾಗವಹಿಸಿದ್ದರು.