ಮನೆ ಹಾಸ್ಯ ನಗೆ ಹನಿ

ನಗೆ ಹನಿ

0

ಒಟ್ಟಿಗೆ

ಗುಂಡ: “ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು.”

ಪುಟ್ಟ: “ಹೌದಾ; ಆಮೇಲೆ”

ಗುಂಡ: “ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ” .

ಪುಟ್ಟ: “ಆಮೇಲೆ”

ಗುಂಡ: “ಒಬ್ಬೊಬ್ರೆ ಬಂದು ಹೊಡೆದ್ರು…”

*****

ಯಾರು?

ಸರ್ದಾರ್: “ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ…”

ವ್ಯಕ್ತಿ: “ಅವಳು ನನ್ನ ಮಗಳು..”

ಸರ್ದಾರ್: “ನೀವು ಅವರ ತಂದೆಯಾ?”

ವ್ಯಕ್ತಿ: “ಅಲ್ಲ ತಾಯಿ”

*****

ದೂರ

ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ –

“ಅಮೇರಿಕಾ ಎಷ್ಟು ತಾಸು ಪ್ರಯಾಣ”.

ರಿಸೆಪ್ಷನಿಸ್ಟ್ ಹೇಳಿದಳು “ಒಂದು ತಾಸು”

ಸರ್ದಾರ ಹೇಳಿದ- “ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ”

*****

ಹಿಂದಿನ ಲೇಖನಗ್ರಾಹಕ ಕಾಯ್ದೆಯ ಮುಖ್ಯ ಉದ್ದೇಶ ಗ್ರಾಹಕರ ರಕ್ಷಣೆಯಾಗಿದೆ: ಬಿ ನಾರಾಯಣಪ್ಪ
ಮುಂದಿನ ಲೇಖನಪ್ರಕೃತಿಯಲ್ಲಿ ದೇವರನ್ನು ಕಂಡವರು ಕುವೆಂಪು: ಡಾ.ಹೆಚ್ ಎಸ್ ಸತ್ಯನಾರಾಯಣ