ಮನೆ ರಾಜಕೀಯ ಸ್ಯಾಂಟ್ರೋ ರವಿ ಯಾರು ಗೊತ್ತಿಲ್ಲ: ಡಾ.ಅಶ್ವತ್ಥ ನಾರಾಯಣ

ಸ್ಯಾಂಟ್ರೋ ರವಿ ಯಾರು ಗೊತ್ತಿಲ್ಲ: ಡಾ.ಅಶ್ವತ್ಥ ನಾರಾಯಣ

0

ಬೆಂಗಳೂರು(Bengaluru): ಸ್ಯಾಂಟ್ರೋ ರವಿ ಯಾರು ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರ ನಾನು ಮಾತನಾಡುವುದಕ್ಕೆ ಆಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಜೊತೆ ಸಚಿವ ಎಸ್.ಟಿ ಸೋಮಶೇಖರ್ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ಸ್ಯಾಂಟ್ರೋನೂ  ಗೊತ್ತಿಲ್ಲ. ಯಾವುದೋ ಸಂದರ್ಭದಲ್ಲಿ ಸಚಿವರ ಜೊತೆ ಫೋಟೋ ತೆಗೆಸಿ ಕೊಂಡಿರುತ್ತಾರೆ. ಇದಕ್ಕೆಲ್ಲ ಆರೋಪ ಮಾಡಿದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು.