ಮನೆ ಅಪರಾಧ ಸಾಲಗಾರರ ಕಾಟ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ

ಸಾಲಗಾರರ ಕಾಟ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ

0

ಶಿವಮೊಗ್ಗ: ಸಾಲಗಾರರ ಕಾಟ ತಾಳಲಾರದೆ ತಮ್ಮ ಸಾಕು ಮಗನೊಂದಿಗೆ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವಿಷ ಸೇವಿಸಿದ ವೃದ್ದರಾದ ಪ್ರತಾಪ (70) ಮತ್ತು ದಾನಮ್ಮ (63) ದಂಪತಿಗಳು ಮನೆಯಲ್ಲೇ ಸಾವನ್ನಪ್ಪಿದರೆ, ಅಸ್ವಸ್ಥರಾಗಿದ್ದ ಮಗ ಮಂಜುನಾಥ್ (25) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶಿವಮೊಗ್ಗದ ಮಿಳಘಟ್ಪದ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬವು ಮನೆ ನಿರ್ವಹಣೆಗೆ ಸಾಲ ಮಾಡಿಕೊಂಡಿತ್ತು. ಸಾಕಿದ ಮಗನೂ ಪಾರ್ಶ್ವವಾಯು ಪೀಡಿತರಾದ ಹಿನ್ನೆಲೆಯಲ್ಲಿ ಆತ ಕೂಡಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದ. ಪತಿಗೆ ವಯಸ್ಸು ಆಗಿದ್ದರಿಂದ ಕೆಲಸವಿರಲಿಲ್ಲ. ಪತ್ನಿಯೇ ಕೊಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಬೇಕಿತ್ತು.

ಮನೆ ಬಾಡಿಗೆ ಕಟ್ಟಲಾಗದೇ ದಂಪತಿಗಳ ಪರದಾಟ ನಡೆಸುತ್ತಿದ್ದರು.  ಅಲ್ಲದೇ ಸಾಲಗಾರರ ಕಾಟದಿಂದಾಗಿ ಊಟದಲ್ಲಿ ವಿಷ ಬೆರೆಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸಿದ್ದರಾಮಯ್ಯ ಅವರಿಗೆ ಮನೆದೇವರ ಎಚ್ಚರಿಕೆ
ಮುಂದಿನ ಲೇಖನನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್ ಅನುಮತಿ; ಕಾಮಗಾರಿಗೆ ನಿರ್ಬಂಧ ಮುಂದುವರಿಕೆ