Saval TV on YouTube
ಚಾಮರಾಜನಗರ(Chamarajanagar): ಕೋತಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸುವ ಸಲುವಾಗಿ ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ಕೋತಿಗಳನ್ನು ಹೆದರಿಸಿ ಓಡಿಸುವಲ್ಲಿ ತಾಲ್ಲೂಕಿನ ಅಜ್ಜೀಪುರದ ರೈತ ಮಂಜು ಯಶಸ್ವಿಯಾಗಿದ್ದಾರೆ.
ಅವರ ವಿಲಕ್ಷಣ ಉಪಾಯದಿಂದ ಎಲ್ಲರಲ್ಲೂ ಬೆರಗು ಹುಟ್ಟಿಸಿದ್ದಾರೆ. ಹುಲಿಯ ವೇಷ ಧರಿಸಿರುವ ನಾಯಿಯ ಚಿತ್ರ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಲ್ಲೂಕಿನ ಅಜ್ಜೀಪುರದ ಹೊರವಲಯದಲ್ಲಿರುವ ತೋಟಗಳಿಗೆ ಕೋತಿಗಳ ಉಪಟಳ ವಿಪರೀತವಾಗಿದ್ದು, ಅವುಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೋತಿಗಳನ್ನು ಓಡಿಸಲು ಮಂಜು ಕಂಡುಕೊಂಡ ಉಪಾಯ ಫಲ ನೀಡುತ್ತಿದೆ.
ಜಮೀನಿನಲ್ಲಿ ಬೆಳೆದಿದ್ದ ಬೆಳೆ, ತೆಂಗಿನ ಕಾಯಿಗಳನ್ನು ಹಾಳು ಮಾಡುತ್ತಿದ್ದ ಕೋತಿಗಳು ಈಗ ನಾಯಿ ನೋಡಿ ಹೆದರಿ ದೂರ ಸರಿದಿವೆ. ಬೆಳೆ ರೈತನ ಕೈ ಸೇರುತ್ತಿದೆ.
ಕಾಡಿನ ಸಮೀಪದ ಜಮೀನುಗಳಲ್ಲಿ ನಾಯಿ ಓಡಾಡುತ್ತಿದ್ದು, ಹುಲಿ ವೇಷದ ನಾಯಿ ಕಂಡು ಬೆಚ್ಚಿ ಬಿದ್ದವರಿದ್ದಾರೆ. ನಿಜಾಂಶ ಗೊತ್ತಾದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.