ಮನೆ ರಾಜ್ಯ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಕ್ಷಣಗಣನೆ: ಹುಬ್ಬಳ್ಳಿಗಿಂದು ಪ್ರಧಾನಿ ಮೋದಿ, ಎಲ್ಲೆಡೆ ಬಿಗಿ ಭದ್ರತೆ

26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಕ್ಷಣಗಣನೆ: ಹುಬ್ಬಳ್ಳಿಗಿಂದು ಪ್ರಧಾನಿ ಮೋದಿ, ಎಲ್ಲೆಡೆ ಬಿಗಿ ಭದ್ರತೆ

0

ಧಾರವಾಡ: ಸ್ವಾಮಿ ವಿವೇಕಾನಂದರ 160ನೇ ಜನ್ಮದಿನ ಆಚರಣೆಯ ಭಾಗವಾಗಿ ಆಯೋಜನೆ ಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಜಮ್ಮು–ಕಾಶ್ಮೀರದಿಂದ ತಮಿಳುನಾಡಿನವರೆಗೆ, ಗುಜರಾತ್‌’ನಿಂದ ಕೋಲ್ಕತ್ತವರೆಗೆ ದೇಶದ ಎಲ್ಲಾ ರಾಜ್ಯ ಗಳ ಯುವ ಪ್ರತಿನಿಧಿಗಳೂ ಹಲವು ನಿರೀಕ್ಷೆ, ಹೊಸ ಭರವಸೆಯೊಂದಿಗೆ ಬಂದಿಳಿದಿದ್ದಾರೆ.

ಜ.12ರಿಂದ 16ರವರೆಗೆ ನಡೆಯಲಿರುವ ಯುವಜನೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಗುರುವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

2012ರಲ್ಲಿ ಮಂಗಳೂರು ಹಾಗೂ ಇದೀಗ 2023ರಲ್ಲಿ ಧಾರವಾಡ ಆಯ್ಕೆ ಮೂಲಕ ರಾಜ್ಯ ಎರಡನೇ ಬಾರಿಗೆ ಯುವಜನೋತ್ಸವ ಆಯೋಜಿಸುವ ಅವಕಾಶ ಪಡೆದಿದೆ.

ಪ್ರಧಾನಿ ಉದ್ಘಾಟಿಸುತ್ತಿರುವ ಮೊದಲ ಯುವಜನೋತ್ಸವ ಎಂಬ ಗರಿಮೆಯೂ ಈ ಉತ್ಸವಕ್ಕಿದೆ. ನಗರದ ಐದು ಸಭಾಂಗಣಗಳು, ಏಳು ಕ್ರೀಡಾಂಗಣಗಳು ಸಜ್ಜಾಗಿವೆ. ಕರ್ನಾಟಕ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿರುವ ವೇದಿಕೆಯಲ್ಲಿ ನಿರುಪಮಾ ರಾಜೇಂದ್ರ, ವಿಜಯಪ್ರಕಾಶ್, ಥೈಕುಡುಮ್ ಬ್ರಿಡ್ಜ್‌ ಬ್ಯಾಂಡ್, ಮೆಮೆ ಖಾನ್ ಖ್ಯಾತನಾಮರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಆಯೋಜನೆಗೊಂಡಿವೆ.

ಜ.15ರಂದು ಬೆಳಿಗ್ಗೆ ಯೋಗಥಾನ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಯೋಗಾಭ್ಯಾಸ ನಡೆಸಿ ಗಿನ್ನಿಸ್ ದಾಖಲೆ ಮಾಡಲೂ ಸಿದ್ಧತೆ ನಡೆದಿದೆ. ಕೇಂದ್ರ ಕ್ರೀಡೆ ಹಾಗೂ ಯುವಜನ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಸೇರಿ ಒಟ್ಟು ₹20 ಕೋಟಿ ಅನುದಾನ ಈ ಯುವಜನೋತ್ಸವಕ್ಕೆ ನೀಡಿವೆ.

ಸ್ಥಳೀಯವಾಗಿಯೂ ದೇಣಿಗೆ ಸಂಗ್ರಹಿಸಲಾಗಿದೆ. ಧಾರವಾಡ ದಲ್ಲಿವಿವೇಕಾನಂದರ ಚಿತ್ರವೇ ಇಲ್ಲದ ಯುವಜನೋತ್ಸವದಲ್ಲಿ ರಾಜಕೀಯ ಮುಖಂಡರ ಫ್ಲೆಕ್ಸ್‌’ಗಳು ರಾರಾಜಿಸುತ್ತಿವೆ. ಸಮಾರಂಭದ ಉದ್ಘಾಟನೆಗೆ ಪ್ರತಿ ಕಾಲೇಜಿನಿಂದ ತಲಾ 100 ವಿದ್ಯಾರ್ಥಿ ಗಳನ್ನು ಕಳುಹಿಸುವುದು ಕಡ್ಡಾಯ ಗೊಳಿಸಿರುವುದು, ಬುಧವಾರ ಸಂಜೆಯವರೆಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡದಿರುವುದೂ ಚರ್ಚೆಗೆ ಗ್ರಾಸವಾಗಿದೆ.

ಧಾನಿ ಆಗಮನದ 30 ನಿಮಿಷಗಳ ಮೊದಲು ಮತ್ತು ಅವರ ನಿರ್ಗಮನದ ನಂತರ ಈ ರಸ್ತೆಗಳಲ್ಲಿ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ. ಪೊಲೀಸರು ಈಗಾಗಲೇ ಸಂಚಾರ ವ್ಯತ್ಯಯ ಹಾಗೂ ಮಾರ್ಗ ಬದಲಾವಣೆಗಳನ್ನು ಘೋಷಿಸಿದ್ದಾರೆ.

ರೈಲ್ವೇ ಮೈದಾನದಲ್ಲಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯ ಹೊರತಾಗಿ, ಮುಖ್ಯ ವೇದಿಕೆಯ ಮುಂಭಾಗದಲ್ಲಿ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ, ಪೊಲೀಸರು ಭಾರೀ ಭದ್ರತಾ ವ್ಯವಸ್ಥೆ, ಬಾಂಬ್ ಪತ್ತೆ ಮತ್ತು ಶ್ವಾನ ದಳವನ್ನೂ ನಿಯೋಜಿಸಿದ್ದಾರೆ.

ನಗರದಲ್ಲಿ ಏಳು ಎಸ್‌’ಪಿ ಶ್ರೇಣಿಯ ಅಧಿಕಾರಿಗಳು, 25 ಡಿಎಸ್‌’ಪಿಗಳು, 60 ಇನ್‌’ಸ್ಪೆಕ್ಟರ್‌ಗಳು, 18 ಪ್ಲಟೂನ್‌ಗಳಾದ ಕೆಎಸ್‌’ಆರ್‌ಪಿ, ಸಿಎಆರ್ ಮತ್ತು ಡಿಎಆರ್ ಸಿಬ್ಬಂದಿ ಸೇರಿದಂತೆ ಒಟ್ಟು 2,900 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಿಂದಿನ ಲೇಖನಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಕೋತಿಗಳ ಉಪಟಳದಿಂದ ಬೆಳೆ ರಕ್ಷಿಸಲು ಸಾಕು ನಾಯಿಗೆ ಹುಲಿ ಬಣ್ಣ ಬಳಿದ ರೈತ