ಹುಬ್ಬಳ್ಳಿ: ಬಿಜೆಪಿಯ ನಾಯಕರು ಶಾಸಕರಲ್ಲಿಯೇ ಕೆಸರು ಎರಚಾಟ ಆರಂಭವಾಗಿದೆ. ಇಡೀ ರಾಜ್ಯಕ್ಕೆ ಬಿಜೆಪಿ ಸಂಸ್ಕೃತಿ ಏನೆಂದು ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ತಿಪ್ಪಾರಡ್ಡಿ ಅವರದೆನ್ನಲಾದ ಆಡಿಯೋಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್ ಸರ್ಕಾರವೋ, 50 ಪರ್ಸೆಂಟ್ ಸರ್ಕಾರವೋ ಅವರ ಅವರಲ್ಲಿಯೇ ಆರೋಪ-ಪ್ರತ್ಯಾರೋಪ ಮಾಡಲಾಗುತ್ತಿದೆ. ನಾವು ಚರ್ಚೆ ಮಾಡಿ ಏನು ಪ್ರಯೋಜನವಿಲ್ಲ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.
ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವಹಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆ ಯಾವ ರೀತಿ ಮಾಡುತ್ತಾರೆ, ಏನೆಲ್ಲಾ ಮಾಡುತ್ತಾರೆ ನೋಡೋಣ. ತನಿಖೆಯಿಂದ ಏನೆಲ್ಲಾ ಸತ್ಯಾಂಶ ಹೊರಬರುತ್ತದೆ, ಕಾದು ನೋಡೋಣ ಎಂದರು.
ಇಂದಿನಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭಿಸಲಾಗುತ್ತಿದೆ. ಇದು ಮುಂದಿನ 15 ದಿನಗಳ ಕಾಲ ಫೆಬ್ರವರ 2ರ ವರೆಗೆ ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ನಂತರ ನಾಲ್ಕನೇ ಹಂತದ ಪಂಚರತ್ನ ಯಾತ್ರೆ ಕಿತ್ತೂರು ಕರ್ನಾಟಕದಲ್ಲಿ ನಡೆಯುತ್ತದೆ ಎಂದರು.














