ಮನೆ ಅಪರಾಧ ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ಯುವತಿ ಮೃತದೇಹ ಪತ್ತೆ: ಜೊತೆಗಿದ್ದ ಯುವಕ ನಾಪತ್ತೆ

ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ಯುವತಿ ಮೃತದೇಹ ಪತ್ತೆ: ಜೊತೆಗಿದ್ದ ಯುವಕ ನಾಪತ್ತೆ

0

ಮೈಸೂರು (Mysuru): ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಜೊತೆಗಿದ್ದ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ.

ವಿನೋಬಾ ರಸ್ತೆಯಲ್ಲಿರುವ ಕೋರಂ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಅಪೂರ್ವ ಶೆಟ್ಟಿ ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ. ಕಳೆದ ಎರಡು ದಿನಗಳ ಹಿಂದೆ ಯುವಕನ ಜೊತೆ ಬಂದ ಅಪೂರ್ವ ಶೆಟ್ಟಿ ಕೊಠಡಿ ಪಡೆದು ತಂಗಿದ್ದಾರೆ. ಇಂದು ಯುವಕ ಕೊಠಡಿಯಲ್ಲಿ ಇಲ್ಲದ ವೇಳೆ ಯುವತಿ ಮೃತದೇಹ ಪತ್ತೆಯಾಗಿದೆ.

ಯುವಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಯುವತಿ ಸಾವು ಸಹಜವೋ ಕೊಲೆಯೋ ತನಿಖೆ ನಂತರ ಖಚಿತವಾಗಲಿದೆ. ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಯುವತಿ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.

ಹಿಂದಿನ ಲೇಖನಬೆಟ್ಟದ ನೆಲ್ಲಿಕಾಯಿಯಲ್ಲಿರುವ ಆರೋಗ್ಯ ಗುಣಗಳು
ಮುಂದಿನ ಲೇಖನಸೆ.5ಕ್ಕೆ ಕಾಂತಾರ ಸಿನಿಮಾದ ಟ್ರೈಲರ್‌ ರಿಲೀಸ್‌