ಮನೆ ರಾಜ್ಯ ಮೈಸೂರು ವಿವಿ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಆಗದಿದ್ದರೇ ಹೋರಾಟ: ಮರಿತಿಬ್ಬೇಗೌಡ ಎಚ್ಚರಿಕೆ

ಮೈಸೂರು ವಿವಿ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಆಗದಿದ್ದರೇ ಹೋರಾಟ: ಮರಿತಿಬ್ಬೇಗೌಡ ಎಚ್ಚರಿಕೆ

0

ಮೈಸೂರು(Mysuru): ಎಲ್ಲಾ ವಿವಿಗಳಲ್ಲಿ ವೇತನ ಪರಿಷ್ಕರಣೆಯಾಗಿರುವಂತೆ ಮೈಸೂರು ವಿವಿಯ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಆಗಬೇಕು. ಇಲ್ಲವಾದಲ್ಲಿ ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಉನ್ನತ ಶಿಕ್ಷಣ ಸಚಿವರು ಕೂಡಲೇ ಸಭೆ ಕರೆದು ಈ ಸಮಸ್ಯೆ ಬಗೆ ಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಮೈಸೂರು ವಿವಿಗೆ ಸರ್ಕಾರವೇ ಕಳಂಕ ತರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದೆ. ಯುಜಿಸಿ ಆದೇಶ ಪ್ರಕಾರ ಎಲ್ಲಾ ವಿ.ವಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಒಂದು ಪಿರಿಯಡ್ ಗೆ 1500 ರೂ ನಿಗದಿ ಮಾಡಿದೆ. ಮಾಸಿಕ 40 ರಿಂದ 50 ಸಾವಿರ ವೇತನ ನೀಡುತ್ತಿವೆ. ಈಗಾಗಲೇ ರಾಜ್ಯದ ಬೇರೆ ಬೇರೆ ವಿ.ವಿಗಳಲ್ಲಿ ವೇತನ ಪರಿಷ್ಕರಣೆ ಆಗಿದೆ. ಇದು ಯುಜಿಸಿ ಗೈಡ್’ಲೈನ್ಸ್ ಆಧಾರದ ಮೇಲೆ ವೇತನ ಪರಿಷ್ಕರಣೆ ಮಾಡಿವೆ ಎಂದು ತಿಳಿಸಿದರು.

ಮೈಸೂರು ವಿವಿ ಸಿಂಡಿಕೇಟ್, ಉಪ ಸಮಿತಿಯ ಆಧಾರ ಮೇಲೆ 24 ಸಾವಿರ ಇದ್ದ ಮಾಸಿಕ ವೇತನ 37 ಸಾವಿರ ಹೆಚ್ಚಳ ಮಾಡಿ ವೇತನ ನೀಡಲು ಪರಿಷ್ಕರಣೆ  ಮಾಡಿದ್ದಾರೆ. ಒಂದು ತಿಂಗಳ ವೇತನ ಪಡೆದ ಮೇಲೆ  ಘೋಷಣೆ ಮಾಡಿದ ವೇತನ ಪರಿಷ್ಕರಣೆಯನ್ನ ವಾಪಸ್ ಪಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಂಡಿಕೇಟ್ ಒಪ್ಪಿಗೆ ಇಲ್ಲದೆ ಅವರ ನಿವೃತ್ತಿ ಸಮಯದಲ್ಲಿ ಹಳೇ ಕುಲಪತಿಗಳು ಅಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ರಾಜ್ಯ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ವಿ.ವಿ ಆಡಳಿತ ವರ್ಗ ಕೂಡ ಆರ್ಥಿಕ ಇಲಾಖೆಗೆ ತಪ್ಪು ಮಾಹಿತಿ ನೀಡಿದೆ. ಬೋಧಕೇತರರ ನೇಮಕ, ಅತಿಥಿ ಉಪನ್ಯಾಸಕರ ನೇಮಕಾತಿಯಿಂದ ಹೆಚ್ಚುವರಿಯಾಗಿ 2.8 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ. ಇವರು 4 ಕೋಟಿ ಹೆಚ್ಚುವರಿಯಾಗಲಿದೆ ಎಂದು ತಪ್ಪು ಮಾಹಿತಿ ನೀಡುತ್ತದೆ.

ರಾಜ್ಯದ ಎಲ್ಲಾ ವಿ.ವಿ ಗಳಲ್ಲಿ ಸಾಕಷ್ಟು ಬ್ಯಾಕ್ ಲಾಗ್ ಹುದ್ಧೆಗಳು ಖಾಲಿ ಇವೆ. ಇದರ ಜೊತೆ ಶೇ.60 ಖಾಯಂ ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರು ಮೈಸೂರು ವಿ.ವಿಯಲ್ಲಿ ಸುಮಾರು 900 ಜನ ಕೆಲಸ ಮಾಡುತಿದ್ದಾರೆ. ಈ ಅತಿಥಿ ಉಪನ್ಯಾಸಕರು ಇಲ್ಲದಿದ್ದರೆ ವಿವಿಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಿದರು.

ಮೈಸೂರು ವಿವಿಗೆ ವಾರ್ಷಿಕ ಸುಮಾರು 86 ಕೋಟಿ ಆಂತರಿಕ ಸಂಪನ್ಮೂಲಗಳಿಂದ ಬರುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಕುರಿತು ಭಾರಿ ಚರ್ಚೆ ಮಾಡಿದೆ. ಉನ್ನತ ಶಿಕ್ಷಣ ಸಚಿವರು ಮೈಸೂರು ವಿವಿ ಬಗ್ಗೆ ದೊಡ್ಡ ಉದಾಸೀನ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈಸೂರು ಮಹಾರಾಣಿ ಕಾಲೇಜು ಕುಸಿದು ಬಿದ್ದು ಮೂರು ತಿಂಗಳು ಕಳೆಯಿತು ಯಾರು ಗಮನ ಹರಿಸುತ್ತಿಲ್ಲ. ಇದರ ಬಗ್ಗೆ ನಾನು ಎಷ್ಟೋ ಬಾರಿ ಆಗ್ರಹ ಮಾಡಿದ್ದೇನೆ. ಶಿಕ್ಷಣ ಸಚಿವರು ಮೈಸೂರಿಗೆ ಎಷ್ಟೋ ಬಾರಿ ಬಂದಿದ್ದರೂ ಇತ್ತ ಗಮನ ಹರಿಸಿಲ್ಲ. ಮೈಸೂರು ವಿ.ವಿ ಬಗ್ಗೆ ಇವರಿಗೆ ಒಂದು ರೀತಿ ಉದಾಸೀನತೆ ಇದೆ ಎಂದು ಆಪಾದಿಸಿದರು.