ಮನೆ ಆರೋಗ್ಯ ಈ ಸಮಸ್ಯೆ ಇರುವವರು ಹಸಿರು ಬಟಾಣಿಯನ್ನು ತಿನ್ನಬಾರದು

ಈ ಸಮಸ್ಯೆ ಇರುವವರು ಹಸಿರು ಬಟಾಣಿಯನ್ನು ತಿನ್ನಬಾರದು

0

ಬಟಾಣಿ ಬಹುತೇಕರ ಇಷ್ಟಪಡುವಂತಹ ಒಂದು ಕಾಳಾಗಿದೆ. ತಿನ್ನಲು ರುಚಿಕರವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು. ಇದೀಗ ಬಟಾಣಿ ಸೀಸನ್ ಎಂದೇ ಹೇಳಬಹುದು. ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಹಸಿ ಬಟಾಣಿಗಳನ್ನು ಮಾರಾಟ ಮಾಡಲಾಗುತ್ತಿದೆ. ಬಟಾಣಿಯನ್ನು ಸಾಂಬಾರ್, ಪಲಾವ್ ಹೀಗೆ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ಆದ್ರೆ ನಿಮಗೆ ಗೊತ್ತಾ ಈ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಬಟಾಣಿಯನ್ನು ತಿನ್ನಬಾರದಂತೆ.

ಆಮ್ಲೀಯತೆ

ನಿಮಗೆ ಅನುಭವಕ್ಕೆ ಬಂದಿರಬಹುದು, ಕೆಲವರಿಗೆ ಬಟಾಣಿ ಸೇವಿಸದ ನಂತರ ಗ್ಯಾಸ್ಟ್ರಿಕ್ ಆಗುತ್ತದೆ. ಹೌದು ಹಸಿ ಬಟಾಣಿ ತಿಂದ್ರೆ ಗ್ಯಾಸ್ಟ್ರಿಕ್ ಆಗುತ್ತದೆ. ಹಾಗಾಗಿ ಯಾರಿಗೆಲ್ಲಾ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ, ಹೊಟ್ಟೆ ಉಬ್ಬುವ ಸಮಸ್ಯೆ ಇದೆಯೋ ಅಂತಹವರು ಹಸಿರು ಬಟಾಣಿ ಸೇವಿಸುವುದನ್ನು ತಪ್ಪಿಸಬೇಕು.

ಹಸಿರು ಬಟಾಣಿಗಳಲ್ಲಿ ಕಾರ್ಬೋಹೈಡ್ರೇಟ್ ಅಂಶವು ಹೆಚ್ಚು. ಅದೇ ಸಮಯದಲ್ಲಿ, ಅದರಲ್ಲಿರುವ ಸಕ್ಕರೆಯು ನಮ್ಮ ಜೀರ್ಣಾಂಗ ವ್ಯವಸ್ಥೆಯಿಂದ ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಸಿರು ಬಟಾಣಿಯನ್ನು ಅತಿಯಾಗಿ ಸೇವಿಸಿದಾಗ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ, ಉಬ್ಬುವುದು ಮತ್ತು ಹೊಟ್ಟೆ ಉಬ್ಬರದಂತಹ ತೊಂದರೆಗಳು ಉಂಟಾಗುತ್ತವೆ.

ಹೆಚ್ಚಿನ ಯೂರಿಕ್ ಆಮ್ಲ

ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆ ಇರುವವರು ಬಟಾಣಿಗಳ ಸೇವನೆಯನ್ನು ತಪ್ಪಿಸಬೇಕು. ಹಸಿರು ಬಟಾಣಿಯಲ್ಲಿ ಪ್ರೋಟೀನ್, ಅಮೈನೋ ಆಮ್ಲಗಳು, ವಿಟಮಿನ್ ಡಿ ಮತ್ತು ಫೈಬರ್ ಅಧಿಕವಾಗಿದೆ. ಈ ಪೋಷಕಾಂಶಗಳು ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಆದರೆ ಹೆಚ್ಚು ಹಸಿರು ಬಟಾಣಿ ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ, ಇದು ಕೀಲು ನೋವನ್ನು ಹೆಚ್ಚಿಸುತ್ತದೆ. ಇದು ನಂತರ ಸಂಧಿವಾತ ಮತ್ತು ಗೌಟ್ ಸಮಸ್ಯೆಗೆ ಕಾರಣವಾಗಬಹುದು.

ಮೂತ್ರಪಿಂಡದ ಸಮಸ್ಯೆಗಳು

ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಹಸಿರು ಬಟಾಣಿ ಸೇವನೆಯನ್ನು ತಪ್ಪಿಸಬೇಕು. ಹಸಿರು ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ, ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಹಸಿರು ಬಟಾಣಿಯನ್ನು ಅತಿಯಾಗಿ ಸೇವಿಸುವುದರಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಈ ಕಾರಣದಿಂದಾಗಿ ಮೂತ್ರಪಿಂಡದ ರೋಗಿಗಳು ಸೀಮಿತ ಪ್ರಮಾಣದಲ್ಲಿ ಬಟಾಣಿಯನ್ನು ಸೇವಿಸಲು ಸಲಹೆ ನೀಡುತ್ತಾರೆ.

ಬೊಜ್ಜು

ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ಹಸಿರು ಬಟಾಣಿಯನ್ನು ಆದಷ್ಟು ಕಡಿಮೆ ಸೇವಿಸುವುದು ಒಳ್ಳೆಯದು. ಹಸಿರು ಬಟಾಣಿಯಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ನಾರಿನಂಶವೂ ಇದರಲ್ಲಿದ್ದು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗಿಸುವುದಲ್ಲದೆ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ.