ಮನೆ ಅಪರಾಧ ಜೈಲಿನಿಂದಲೇ ಕುಖ್ಯಾತ ರೌಡಿಶೀಟರ್ ಹತ್ಯೆಗೆ ಸಂಚು: ಇಬ್ಬರ ಬಂಧನ

ಜೈಲಿನಿಂದಲೇ ಕುಖ್ಯಾತ ರೌಡಿಶೀಟರ್ ಹತ್ಯೆಗೆ ಸಂಚು: ಇಬ್ಬರ ಬಂಧನ

0

ಬೆಂಗಳೂರು: ಜೈಲಿನಲ್ಲಿದ್ದುಕೊಂಡೇ ಕುಖ್ಯಾತ ರೌಡಿಶೀಟರ್​ ಕುಣಿಗಲ್ ಗಿರಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ.

ಸಿಲಿಂಡರ್ ಸುನೀಲ, ಅವಿನಾಶ್​ ಬಂಧಿತ ಆರೋಪಿಗಳು. ಸೂರಿ ಕೊಲೆ ಪ್ರಕರಣದಲ್ಲಿ ರಾಬರಿ ಕಿಟ್ಟಿ ಕ್ಯಾಪ್ಟರ್ ಜೈಲಿನಲ್ಲಿದ್ದಾನೆ.

ಜೈಲಿನಲ್ಲಿರುವ ರಾಬರಿ ಕಿಟ್ಟಿ, ಕಾಮಾಕ್ಷಿಪಾಳ್ಯದ ರೌಡಿಶೀಟರ್ ಆಗಿರುವ ಕುಣಿಗಲ್ ಗಿರಿ ಕೊಲೆಗೆ ಸಂಚು ರೂಪಿಸಿದ್ದನು.

ಕುಣಿಗಲ್ ಗಿರಿಯನ್ನು ಕೊಲೆ ಮಾಡಲು ರಾಬರಿ ಕಿಟ್ಟಿ ಶಿಷ್ಯನಾದ ಸಿಲಿಂಡರ್ ಸುನೀಲನಿಗೆ ಸುಪಾರಿ ನೀಡಿದ್ದನು. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಸುನೀಲ ಅಡ್ಡೆ ಮೇಲೆ ದಾಳಿ ಮಾಡಿ ಸಿಲಿಂಡರ್ ಸುನೀಲ ಮತ್ತು ಈತನ ಸಹಚರ ಅವಿನಾಶ್ ​​ನನ್ನು ಬಂಧಿಸಿದ್ದಾರೆ. ಸಿಲಿಂಡರ್ ಸುನೀಲ ಕೆಂಗೇರಿ ಪೊಲೀಸ್​ ಠಾಣೆ ವ್ಯಪ್ತಿಯ ರೌಡಿಶೀಟರ್ ಆಗಿದ್ದಾನೆ.

ದಾಳಿ ವೇಳೆ ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನರೌಡಿಶೀಟರ್ ಜೊತೆ ಲಿಂಕ್:  ಸಿಸಿಬಿ ಇನ್ಸ್​ ಪೆಕ್ಟರ್ ಅಮಾನತು
ಮುಂದಿನ ಲೇಖನಸುಳ್ಳು ಆರೋಪ ಹೊರಿಸಿ ತೇಜೋವಧೆ: ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದ ಈಶ್ವರ್ ಖಂಡ್ರೆ