ಮನೆ ಅಪರಾಧ ಮೈಸೂರು: ಡ್ರಗ್ ಪೆಡ್ಲರ್’ಗಳ ಮನೆ ಮೇಲೆ ಪೊಲೀಸರ ದಾಳಿ- 9 ಮಂದಿ ವಶಕ್ಕೆ

ಮೈಸೂರು: ಡ್ರಗ್ ಪೆಡ್ಲರ್’ಗಳ ಮನೆ ಮೇಲೆ ಪೊಲೀಸರ ದಾಳಿ- 9 ಮಂದಿ ವಶಕ್ಕೆ

0

ಮೈಸೂರು(Mysuru):  ಸೋಮವಾರ ಬೆಳ್ಳಂಬೆಳಿಗ್ಗೆ ಸಾಂಸ್ಕೃತಿಕ ನಗರಿಯ ಡ್ರಗ್ಸ್ ಪೆಡ್ಲರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಮಂದಿಯನ್ನುವಶಕ್ಕೆ ಪಡೆದಿದ್ದಾರೆ.

ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ನಗರದ 30 ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಶ್ಚಾನದಳ ಬಳಸಿ ಮನೆಗಳಲ್ಲಿ ತಪಾಸಣೆ ನಡೆಸಲಾಯಿತು. ಬೆಳಗಿನ ಜಾವ 4 ಗಂಟೆಯಿಂದ 7 ಗಂಟೆವರೆಗೆ 40 ಪೊಲೀಸ್ ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ ವೇಳೆ ಅರ್ಧ ಕೆಜಿ ಗಾಂಜಾ ಹಾಗೂ 9 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡ್ರಗ್ಸ್ ಪೆಡ್ಲರ್ ಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಬಾನೋತ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.