ಮನೆ ರಾಷ್ಟ್ರೀಯ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ರಾಜ್ಯದ 20 ಮಂದಿ ಪೊಲೀಸರು ಆಯ್ಕೆ

ರಾಷ್ಟ್ರಪತಿ ಪದಕ ಪ್ರಶಸ್ತಿಗೆ ರಾಜ್ಯದ 20 ಮಂದಿ ಪೊಲೀಸರು ಆಯ್ಕೆ

0

ನವದೆಹಲಿ(New Delhi): 74 ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾಗುವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಕರ್ನಾಟಕದ 20 ಮಂದಿ ಪೋಲೀಸ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ.  ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ 8 ಇತರ ಎಂದು ತಿಳಿಸಿದೆ.

ಇದರಲ್ಲಿ 140 ಮಂದಿ ಪೊಲೀಸ್ ಸಿಬ್ಬಂದಿಯನ್ನು ಶೌರ್ಯ ಪ್ರಶಸ್ತಿಗಾಗಿ , 93 ಮಂದಿ ವಿಶಿಷ್ಟ ಸೇವೆಗಾಗಿ ಮರಣೋತ್ತರವಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಅಯ್ಕೆ ಮಾಡಲಾಗಿದೆ.

ಇನ್ನುಳಿದ 668 ಮಂದಿಗೆ ವಿಶೇಷ ಸೇವೆಗೆ ಹಾಗು 140 ಶೌರ್ಯ ಪ್ರಶಸ್ತಿಗಳಲ್ಲಿ, 80 ಪ್ರಶಸ್ರಿಯನ್ನು ಎಡಪಂಥೀಯ ಉಗ್ರವಾದದಿಂದ ಪೀಡಿತ ಪ್ರದೇಶಗಳ ಪೊಲೀಸ್ ಸಿಬ್ಬಂದಿಗೆ ಮತ್ತು 45 ಜಮ್ಮು ಮತ್ತು ಕಾಶ್ಮೀರ ಪ್ರದೇಶದವರಿಗೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.

ಪೊಲೀಸ್ ಪದಕಗಳ ಶೌರ್ಯ ಪ್ರಶಸ್ತಿಗೆ 140 ಮಂದಿ, ಗಣನೀಯ ಸೇವೆಗೆ ರಾಷ್ಟ್ರಪತಿ ಪದಕ್ಕಾಗಿ 90 ಮಂದಿ, 668 ಮಂದಿ ವಿಶಿಷ್ಟ ಸೇವೆಗೆ ರಾಷ್ಟ್ರಪತಿ ಪದಕಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯವಾರು ಪ್ರಶಸ್ತಿಗಳ ಪೈಕಿ ಉತ್ತರ ಪ್ರದೇಶ 74, ಮಹಾರಾಷ್ಟ್ರ 39, ತಮಿಳುನಾಡು 21 ಪಶ್ವಿಮ ಬಂಗಾಳ 20, ಕರ್ನಾಟಕದಲ್ಲಿ 19, ಬಿಹಾರ ಹಾಗು ದೆಹಲಿ ತಲಾ 17 ಪ್ರಶಸ್ತಿ ಪಡೆಯುವ ಮೂಲಕ ಮಂಚೂಣಿಯಲ್ಲಿವೆ. ವಿವಿಧ ಭದ್ರತಾ ಪಡೆಗಳಾದ ಸಿಆರ್ ಪಿಎಫ್ 58, ಬಿಎಸ್ ಎಫ್ 47, ಸಿಐಎಸ್ ಎಫ್ 24, ಸಿಬಿಐ 24, ಗುಪ್ತಚರ ಇಲಾಖೆ 26 ಸೇರಿದಂತೆ ವಿವಿಧ ಭದ್ರತಾ ಪಡೆಗಳು ತಮ್ಮ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಸೇವಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.