ಮನೆ ಕಾನೂನು ಮಸೀದಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರಿ ಕೋರ್ಟ್‌ ಗೆ ಮೂರು  ಅರ್ಜಿ ಸಲ್ಲಿಕೆ

ಮಸೀದಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರಿ ಕೋರ್ಟ್‌ ಗೆ ಮೂರು  ಅರ್ಜಿ ಸಲ್ಲಿಕೆ

0

ಮಥುರಾ(Mathura): ಕೃಷ್ಣ ಜನ್ಮಭೂಮಿ, ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿ ಮಸೀದಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ.

ಕೃಷ್ಣನ ವಂಶಸ್ಥ ಎಂದು ಹೇಳಿಕೊಂಡಿರುವ ಮನೀಶ್ ಯಾದವ್ ಎಂಬುವವರು ಮಸೀದಿಯನ್ನು ಸ್ಥಳಾಂತರ ಮಾಡುವಂತೆ 2020ರಲ್ಲಿ ಮೊಕದ್ದಮೆ ಹೂಡಿದ್ದರು. ಇದಕ್ಕೆ ಪೂರಕವಾಗಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ.

ಕಟರ ಕೇಶವ ದೇವ ದೇಗುಲದ 13.37 ಎಕರೆ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.ಇದಕ್ಕೂ ಮುನ್ನ, ಮಸೀದಿಯ ಸಮೀಕ್ಷೆ ನಡೆಸುವಂತೆ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು. ಇದರ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಬೇಸಿಗೆ ರಜೆಯ ಬಳಿಕ ಜುಲೈ 1ಕ್ಕೆ ನಿಗದಿಪಡಿಸಿತ್ತು.

ಮಸೀದಿಯೊಳಗೆ ಹಿಂದು ದೇವಾಲಯದ ಕುರುಹುಗಳಿವೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ನ್ಯಾಯಾಲಯವು ಬೇಸಿಗೆ ರಜೆ ಮುಗಿದು ವಿಚಾರಣೆ ಕೈಗೆತ್ತಿಕೊಳ್ಳುವ ವೇಳೆಗೆ ಮಸೀದಿಯೊಳಗಿರುವ ಹಿಂದು ದೇವಾಲಯದ ಕುರುಹುಗಳನ್ನು ವಿರೂಪಗೊಳಿಸುವ ಅಥವಾ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದ ಪ್ರಧಾನಿಗೆ ಧನ್ಯವಾದ ತಿಳಿಸಿದ ಜಿ.ಟಿ.ದೇವೇಗೌಡ
ಮುಂದಿನ ಲೇಖನಉದ್ಯಮಿ, ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ