ಹೊಸದಿಲ್ಲಿ: ಹಾರ್ದಿಕ್ ಪಾಂಡ್ಯ ಅವರಂಥ ಆಟಗಾರರನ್ನು ಪತ್ತೆ ಮಾಡುವುದು ತುಂಬಾ ಕಷ್ಟದ ಕೆಲಸ. ವಿಶ್ವ ಕ್ರಿಕೆಟ್’ನಲ್ಲಿ ಇಂಥಾ ಕ್ರಿಕೆಟಿಗರು ತುಂಬಾ ಅಪರೂಪ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕ ಹಾಗೂ ಫಿನ್ ಅಲೆನ್ ಅವರ ವಿಕೆಟ್ ಅನ್ನು ಕಬಳಿಸಿದ ಭಾರತ ತಂಡದ ಹಾರ್ದಿಕ್ ಪಾಂಡ್ಯ ಕುರಿತು ಇರ್ಫಾನ್ ಪಠಾಣ್ ಮಾತನಾಡಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಶತಕಗಳ ಬಲದಿಂದ ಭಾರತ ತಂಡ ಭಾರಿ ಅಂತರದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಹಾರ್ದಿಕ್ ಪಾಂಡ್ಯ ತಂಡಕ್ಕೆ ಅತ್ಯಂತ ನಿರ್ಣಾಯಕ ಆಟಗಾರ. ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ತಂಡಕ್ಕೆ ಉತ್ತಮ ಸಂಯೋಜನೆ ತಂದುಕೊಡುವ ಆಟಗಾರ ತುಂಬಾ ಅಗತ್ಯ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಮೊದಲನೇಯದಾಗಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್’ನಲ್ಲಿ ಉತ್ತಮ ಪ್ರದರ್ಶನ ತೋರಿದರು. ನೇರವಾಗಿ ಹೊಡೆದ ಪುಲ್ ಶಾಟ್ಸ್ ತುಂಬಾ ಚೆನ್ನಾಗಿತ್ತು. ಒಂದು ರೀತಿ ಅವರ ಶಾಟ್ಸ್ ಟೆನಿಸ್ ಬಾಲ್ ರೀತಿ ಇತ್ತು. ಆದರೆ, ಅವರು ತಮ್ಮ ಶಾಟ್ಸ್’ಗೆ ಕೊಡುವ ಪವರ್ ಅಸಾಧಾರಣವಾಗಿರುತ್ತದೆ ಎಂದು ಗುಣಗಾನ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಫಾರ್ಮ್’ನಲ್ಲಿದ್ದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಳೆಯ ಚೆಂಡಿನಲ್ಲಿ ರನ್ ಗಳಸಲು ಇತರೆ ಬ್ಯಾಟ್ಸ್’ಮೆನ್’ಗಳು ತೊಂದರೆ ಅನುಭವಿಸುತ್ತಿದ್ದರೆ, ಹಾರ್ದಿಕ್ ಪಾಂಡ್ಯ ಲೀಲಾ-ಜಾಲವಾಗಿ ಬ್ಯಾಟ್ ಬೀಸುತ್ತಿದ್ದರು. ಬೇರೆ ಬ್ಯಾಟ್ಸ್’ಮೆನ್’ಗಳ ರೀತಿ ಹಾರ್ದಿಕ್ ಪಾಂಡ್ಯ ತೊಂದರೆ ಅನುಭವಿಸಲಿಲ್ಲ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಜೆಎಎಸ್’ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್’ನಲ್ಲಿ ಉಭಯ ತಂಡಗಳು ಮುಖಾಮುಖಿ ಕಾದಾಟ ನಡೆಸಲಿವೆ.
ಪಂದ್ಯದ ವಿವರ
ಭಾರತ vs ನ್ಯೂಜಿಲೆಂಡ್
ಮೊದಲನೇ ಟಿ20 ಪಂದ್ಯ
ದಿನಾಂಕ: ಜನವರಿ 27, 2023
ಸಮಯ: ಸಂಜೆ 07: 00 ಗಂಟೆಗೆ
ಸ್ಥಳ: ಜೆಎೆಸ್’ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್