ಬೆಂಗಳೂರು: ರಾಜಗೋಪಾಲನಗರದ ಪೊಲೀಸ್ ಠಾಣೆಯಲ್ಲೇ ಫಿನಾಯಿಲ್ ಕುಡಿದು ಆರೋಪಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಬ್ರಾರ್ ಬಾಷ ಸುಲ್ತಾನ್ ಎಂಬುವನು ಕಳೆದ ಡಿಸೆಂಬರ್ ನಲ್ಲಿ ಶ್ವೇತಾ ಎಂಬ ಮಹಿಳೆಯ ಸರಗಳ್ಳತನ ಮಾಡಿದ್ದನು .
ಕಳ್ಳತನ ಪ್ರಕರಣದಲ್ಲಿ ರಾಜಗೋಪಾಲನಗರ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತನಾಗಿದ್ದ ವೇಳೆ ಪ್ರಕಾಶ್ ಎಂಬ ಪಿಸಿ,ಅಬ್ರಾರ್ ನನ್ನ ಹ್ಯಾಂಡ್ ಕಪ್ ಹಾಗೂ ಲೀಡಿಂಗ್ ಚೈನ್ ಹಾಕಿ ಆರೋಪಿಯನ್ನ ಕರೆದೊಯ್ದಿದ್ದರು.
ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ . ಈ ವೇಳೆ ಶೌಚಾಲಯ ಹೋಗುವ ನೆಪದಲ್ಲಿ ಒಳಗಿದ್ದ ಪಿನಾಯಿಲ್ ಕುಡಿದಿದ್ದಾನೆ.
ಇಷ್ಟು ಹೊತ್ತಾದರು ಬಾರದ ಅಬ್ರಾರ್ ನ್ನು ಗಮನಿಸಿ ಶೌಚಾಲಯಕ್ಕೆ ಹೋದಾಗ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ.
ಆರೋಪಿಯನ್ನು ಹತ್ತಿರದ ಹೆಗ್ಗನಹಳ್ಳಿ ಜೈಮಾರುತಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಪಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ರಾಜಗೋಪಾಲನಗರ ಪೊಲೀಸರು ಮಾಹಿತಿ ನೀಡಿದ್ದಾರೆ.