ಹೊಸ ದಿಲ್ಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿದ್ದಾರೆ.
ಬಜೆಟ್’ನಲ್ಲಿ ಬಹುತೇಕ ಐಷಾರಾಮಿ ವಸ್ತುಗಳ ದರ ಏರಿಕೆಯಾಗಿದೆ. ಇದೇ ವೇಳೆ ಕೆಲವು ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಕೂಡಾ ಆಗಿದೆ.
ಯಾವುದೆಲ್ಲಾ ದರ ಏರಿಕೆ?
• ಸಿಗರೇಟ್ ಮೇಲಿನ ತೆರಿಗೆ ಶೇ. 16ರಷ್ಟು ಏರಿಕೆ. ಪ್ರತಿ ಸಿಗರೇಟ್ ದರ ಶೇ. 1 ರಿಂದ 2 ರಷ್ಟು ಏರಿಕೆ ಸಾಧ್ಯತೆ
• ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ ದುಬಾರಿ
• ಬೈಸಿಕಲ್’ಗಳ ದರ ಏರಿಕೆ
• ಮಕ್ಕಳ ಆಟದ ಸಾಮಾನುಗಳ ದರ ಏರಿಕೆ
ಯಾವುದೆಲ್ಲಾ ದರ ಇಳಿಕೆ?
ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು. ಮೊಬೈಲ್ ಫೋನ್’ಗಳ ದರ ಇಳಿಕೆ
• ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ
• ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ
• ಬ್ಲೆಂಡೆಡ್ ಸಿಎನ್’ಜಿಗೆ ಸುಂಕ ಕಡಿತ
• ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ