ಮನೆ ಅಪರಾಧ ಜಮ್ಮು ಕಾಶ್ಮೀರ ಪೊಲೀಸರಿಂದ ಮೂವರು ಎಲ್ಇಟಿ ಉಗ್ರರ ಬಂಧನ

ಜಮ್ಮು ಕಾಶ್ಮೀರ ಪೊಲೀಸರಿಂದ ಮೂವರು ಎಲ್ಇಟಿ ಉಗ್ರರ ಬಂಧನ

0

ಸೋಪೋರ್​(ಜಮ್ಮು ಕಾಶ್ಮೀರ): ಸೋಪೋರ್​ನಲ್ಲಿ ಲಷ್ಕರ್ ಎ ತೋಯ್ಬಾದ ಮೂವರು ಓವರ್​ ಗ್ರೌಂಡ್ ವರ್ಕರ್​ಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು, ಕೆಲವು ಶಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಜನವರಿ 11ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಾಹಿತಿಗೆ ಈಗ ಬಹಿರಂಗವಾಗಿದೆ. ಸೋಪೋರ್ ಪೊಲೀಸ್, 22 ರಾಷ್ಟ್ರೀಯ ರೈಫಲ್ಸ್​, ಸಿಆರ್​ಪಿಎಫ್​ನ 179 ಬೆಟಾಲಿಯನ್ ಬೋಮೈ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಪೋರಾ ಬಳಿಯ ಚೀನಾರ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.

ಘಟನೆ ವಿವರ: ಗುಂದ್​ಬ್ರಾಥ್ ಗ್ರಾಮದಿಂದ ಆ ಮೂವರು ಭಯೋತ್ಪಾದಕರು ಬೊಮೈ ಕಡೆಗೆ ತೆರಳುತ್ತಿದ್ದರು. ಅವರು ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ, ನಿಲ್ಲುವಂತೆ ಪೊಲೀಸರು ಸೂಚನೆ ನೀಡಿದ ವೇಳೆ ಅವರು ಪರಾರಿಯಾಗಲು ಯತ್ನಿಸಿದ್ದರೂ, ಆದರೂ ಪಟ್ಟು ಬಿಡದ ಸೇನೆ ಮೂವರನ್ನೂ ಬಂಧಿಸಿದೆ.ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ನಂತರ 2 ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್, 13 ಗುಂಡುಗಳು ಮತ್ತು ಒಂದು ಹ್ಯಾಂಡ್​ ಗ್ರೆನೇಡ್ ಅನ್ನು ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಸಹಾಯ ಮಾಡುವವರನ್ನು ಓವರ್ ಗ್ರೌಂಡ್ ವರ್ಕರ್ಸ್ ಎಂದು ಕರೆಯಲಾಗುತ್ತದೆ. ಉಗ್ರರಿಗೆ ಹಣ, ಆಶ್ರಯ ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಇವರದ್ದಾಗಿರುತ್ತದೆ. ಕಲ್ಲು ತೂರಾಟ, ಗಲಭೆ ಸೃಷ್ಟಿ, ಉಗ್ರಗಾಮಿಗಳ ನೇಮಕ ವಿಚಾರದಲ್ಲಿ ಇವರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಅಂದಹಾಗೆ ಇವರೂ ಭಯೋತ್ಪಾದಕರೇ ಆಗಿರುತ್ತಾರೆ.

ಹಿಂದಿನ ಲೇಖನಮಲೆಮಹದೇಶ್ವರ ಬೆಟ್ಟದ ವಸತಿಗೃಹದಿಂದ ತಾಯಿ ಮಗನನ್ನು ಹೊರ ಹಾಕಿದ ಅಧಿಕಾರಿಗಳು
ಮುಂದಿನ ಲೇಖನಭಾರತ-ಚೀನಾದೊಂದಿಗಿನ ಗಡಿ ಸಂಬಂಧ: ಲಡಾಖ್ ಬಿಕ್ಕಟ್ಟಿನ ಕುರಿತು 14ನೇ ಸುತ್ತಿನ ಮಿಲಿಟರಿ ಮಾತುಕತೆ